For the best experience, open
https://m.hosakannada.com
on your mobile browser.
Advertisement

Amith Shah: ಮೀಸಲಾತಿಯನ್ನು ಎಂದೂ ರದ್ದು ಮಾಡಲ್ಲ, ಅದು ಶಾಶ್ವತ - ಅಮಿತ್ ಶಾ ಸ್ಪಷ್ಪನೆ !!

Amith shah: ಮೀಸಲಾತಿಯನ್ನು ಯಾವುದೇ ಕಾರಣಕ್ಕೂ ರದ್ದು ಮಾಡುವುದಿಲ್ಲ, ಅದು ಶಾಶ್ವತವಾದದ್ದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ(Amith Shah) ಸ್ಪಷ್ಟೀಕರಣ ನೀಡಿದ್ದಾರೆ.
12:18 PM Apr 15, 2024 IST | ಸುದರ್ಶನ್
UpdateAt: 12:26 PM Apr 15, 2024 IST
amith shah  ಮೀಸಲಾತಿಯನ್ನು ಎಂದೂ ರದ್ದು ಮಾಡಲ್ಲ  ಅದು ಶಾಶ್ವತ    ಅಮಿತ್ ಶಾ ಸ್ಪಷ್ಪನೆ

Amith Shah: ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಮೀಸಲಾತಿ ರದ್ದತಿ ವಿಚಾರ ಆಗಾಗ ಚರ್ಚೆಯಾಗುತ್ತಿತ್ತು. ಇದೀಗ ಲೋಕಸಭಾ ಚುನಾವಣೆ(Parliament election) ಹೊತ್ತಲ್ಲಿ ಮತ್ತೆ ಆ ವಿಚಾರ ಮುನ್ನಲೆಗೆ ಬಂದಿದ್ದು, ಮೀಸಲಾತಿಯನ್ನು ಯಾವುದೇ ಕಾರಣಕ್ಕೂ ರದ್ದು ಮಾಡುವುದಿಲ್ಲ, ಅದು ಶಾಶ್ವತವಾದದ್ದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ(Amith Shah) ಸ್ಪಷ್ಟೀಕರಣ ನೀಡಿದ್ದಾರೆ.

Advertisement

ಇದನ್ನೂ ಓದಿ: Free Bus: ಇನ್ನು ರಾಜ್ಯದಲ್ಲಿ ಪುರುಷರಿಗೂ ಉಚಿತ ಬಸ್ ಪ್ರಯಾಣ : ಸುಳಿವು ನೀಡಿದ ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ರಾಯರೆಡ್ಡಿ

ಹೌದು, ಬಿಜೆಪಿ(BJP) ಎಂದಿಗೂ ಮೀಸಲಾತಿಯನ್ನು ರದ್ದುಗೊಳಿಸುವುದಿಲ್ಲ. ನಮಗೆ ಈಗ ಬಹುಮತವಿದ್ದು, ಮೀಸಲಾತಿ ವಿಚಾರದಲ್ಲಿ ತಲೆಕೆಡಿಸಿಕೊಂಡಿಲ್ಲ.ಈಗ 370 ನೇ ವಿಧಿಯನ್ನು ರದ್ದುಗೊಳಿಸಿದ್ದೇವೆ ಮತ್ತು ತ್ರಿವಳಿ ತಲಾಖ್(Trivali Talaq) ಕೊನೆಗೊಳಿಸಿದ್ದೇವೆ ಆದರೆ ಮೀಸಲಾತಿಯನ್ನು ರದ್ದುಗೊಳಿಸಲಿಲ್ಲ. ಮೀಸಲಾತಿ(Reservation) ಎಂದಿಗೂ ಶಾಶ್ವತವಾದದ್ದು ಅದನ್ನು ಎಂದೂ ತೆಗೆಯಲ್ಲ, ಕಾಂಗ್ರೆಸ್ ಗೂ ತೆಗೆಯಲು ಬಿಡುವುದಿಲ್ಲ ಎಂದು ಅಮಿತ್ ಶಾ ಹೇಳಿದ್ದಾರೆ.

Advertisement

ಇದನ್ನೂ ಓದಿ: Women drinking blood: ಪ್ರತಿದಿನ ಆಹಾರವಾಗಿ ರಕ್ತ ಕುಡಿಯುವ ಯುವತಿ : ಈಗಾಗಲೇ ಆಕೆ ಸೇವಿಸಿದ್ದು ಬರೋಬ್ಬರಿ 3,785 ಲೀಟರ್ ರಕ್ತ

ಬಳಿಕ ಮಾತನಾಡಿದ ಅವರು 70 ವರ್ಷಗಳಲ್ಲಿ ಕಾಂಗ್ರೆಸ್ 370 ನೇ ವಿಧಿಯನ್ನು ರದ್ದುಗೊಳಿಸಲಿಲ್ಲ. ಆದರೆ ನಾವು ಅದನ್ನು ತೆಗೆದು ಕಾಶ್ಮೀರವನ್ನು ಮುಖ್ಯವಾಹಿನಿಗೆ ತಂದಿದ್ದೇವೆ. ರಾಮಮಂದಿರ ವಿಚಾರವನ್ನು ಕಾಂಗ್ರೆಸ್‌ ವರ್ಷಗಳ ಕಾಲ ಎಳೆದಾಡುತ್ತಾ ಬಂದಿತ್ತು. ರಾಮಮಂದಿರ ನಿರ್ಮಾಣದ ಭರವಸೆಯನ್ನೂ ಮೋದಿ ಈಡೇರಿಸಿದ್ದಾರೆ. ಏಕರೂಪ ನಾಗರಿಕ ಸಂಹಿತೆ, 70 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ನಾಗರಿಕರಿಗೆ 5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ, ಮನೆಗಳಿಗೆ ಅನಿಲ ಸಂಪರ್ಕ, ಬಡವರ ಮನೆಗಳಿಗೆ ಉಚಿತ ವಿದ್ಯುತ್ ಭರವಸೆಯನ್ನು ಬಿಜೆಪಿ ಈಡೇರಿಸಲು ಜನರು ಮೂರನೇ ಅವಧಿಗೆ ಪ್ರಧಾನಿ ಮೋದಿಯನ್ನು ಆಯ್ಕೆ ಮಾಡಬೇಕು ಎಂದು ಹೇಳಿದರು.

Advertisement
Advertisement