For the best experience, open
https://m.hosakannada.com
on your mobile browser.
Advertisement

America : ಇನ್ಮಂದೆ ಸತ್ತವರನ್ನು ಬದುಕಿಸಬಹುದು!! ಅಬ್ಬಬ್ಬಾ.. ಹೆಣಗಳ ಸಂಗ್ರಹಿಸಿ 1,400 ಜನರಿಂದ ನಡೆಯುತ್ತಿದೆ ಭಯಾನಕ ಸಂಶೋಧನೆ !!

America ಇನ್ಮುಂದೆ ಸತ್ತವರನ್ನೂ ಕೂಡ ಬದುಕಿಸುವಂತಹ ಭಯಾನಕ ಪ್ರಯೋಗವೊಂದು ನಡೆಯುತ್ತಿದೆ.
03:28 PM Jul 16, 2024 IST | ಸುದರ್ಶನ್
UpdateAt: 03:28 PM Jul 16, 2024 IST
america   ಇನ್ಮಂದೆ ಸತ್ತವರನ್ನು ಬದುಕಿಸಬಹುದು   ಅಬ್ಬಬ್ಬಾ   ಹೆಣಗಳ ಸಂಗ್ರಹಿಸಿ 1 400 ಜನರಿಂದ ನಡೆಯುತ್ತಿದೆ ಭಯಾನಕ ಸಂಶೋಧನೆ
Advertisement

America: ಹುಟ್ಟು ಮತ್ತು ಸಾವುಗಳು ಯಾವಾಗ ಆಗುತ್ತದೆ ಎಂದು ಹೇಲಾಗದು. ಇದನ್ನು ಬಲ್ಲವರು ಯಾರೂ ಇಲ್ಲ. ಆದರೆ ಇವತ್ತು ಹುಟ್ಟಿದ ಮನುಷ್ಯ ಮಂದೊಂದು ದಿನ ಸಾಯಲೇಬೇಕು. ಆದರೀಗ ಅಚ್ಚರಿ ಏನೆಂದ್ರೇ ಇನ್ಮುಂದೆ ಸತ್ತವರನ್ನೂ ಕೂಡ ಬದುಕಿಸುವಂತಹ ಭಯಾನಕ ಪ್ರಯೋಗವೊಂದು ನಡೆಯುತ್ತಿದೆ.

Advertisement

ಹೌದು, ವೈದ್ಯಕೀಯ ಲೋಕದಲ್ಲಿ ಅನೇಕ ಮಿರಾಕಲ್​ಗಳನ್ನ ನಾವೆಲ್ಲರೂ ಕೇಳಿರ್ತೇವೆ ನೋಡಿರುತ್ತೇವೆ. ಅದರಲ್ಲೂ ಕೆಲ ಘಟನೆಗಳನ್ನ ಕಂಡು ವೈದ್ಯ ಲೋಕವೇ ಅಚ್ಚರಿ ಪಟ್ಟಿರೋದು ಇದೆ. ಅಂತೇಯೇ ಇದೀಗ ನಾವು ಹೇಳ ಹೊರಟಿರುವ ಸಂಗತಿ ತಿಳಿದರೆ ಎಂತವರಿಗೂ ಶಾಕ್ ಆಗಬಹುದು. ಯಸ್, ಇಂದು ಸತ್ತವನನ್ನ ಮುಂದೊಂದು ದಿನ ಬದುಕಿಸಬಹುದು ಅಂತಹೇಳಿ ಕಂಪೆನಿಯೊಂದು ಆಶ್ವಾಸನೆ ನೀಡಿದ್ದು, ಇದಕ್ಕಾಗಿ ರಹಸ್ಯ ಸಂಶೋಧನೆಯೂ ಕೂಡ ನಡೀತಿದೆ. ಇದನ್ನ ನಂಬೋಕೆ ಅಸಾಧ್ಯವಾದ್ರು ಕೂಡಾ, ಅಸಾಧ್ಯವಾದುದನ್ನ ಸಾಧಿಸಲು ಈ ಕಂಪನಿ ಹೊರಟಿದೆ.

ಅಂದಹಾಗೆ ಅಮೆರಿಕಾ(America) ಮೂಲದ ಕಂಪನಿಯೊಂದು ಸತ್ತವರನ್ನ ಮುಂದೊಂದು ದಿನ ಬದುಕಿಸಬಹುದು ಎಂದು ಹೇಳಿದೆ. ವಿಶ್ವದ ಅತೀ ದೊಡ್ಡ ಕ್ರಯೋನಿಸ್​​ ಕಂಪನಿಯಾಗಿರುವ (Alcor) ಆಲ್ಕೋರ್​​ ಲೈಫ್​ ಎಕ್ಸ್​ಟೆನ್ಶನ್​ ಫೌಂಡೇಶನ್​ ಈ ಸಂಶೋಧನೆಗೆ ಹೆಜ್ಜೆ ಇಟ್ಟಿದೆ. 1400ಕ್ಕೂ ಹೆಚ್ಚು ಸದಸ್ಯರನ್ನ ಹೊಂದಿರುವ ಆಲ್ಕೋರ್​​ ಲೈಫ್​ ಎಕ್ಸ್​​ಟೆನ್ಶನ್​ ಫೌಂಡೇಶನ್​ ಕಂಪೆನಿ, ಸತ್ತವರ ಶವವನ್ನ ಸಂರಕ್ಷಿಸಿ ಇಟ್ಟುಕೊಂಡಿದೆಯಂತೆ. ಈಗಾಗಲೇ 233 ಮೇರದೇಹವನ್ನ ಪ್ರಯೋಗಾಲಯದಲ್ಲಿ ಸಂರಕ್ಷಿಸಿ ಇಟ್ಟುಕೊಂಡಿರುವ ಈ ಕಂಪನಿ, ಮುಂದೊಂದು ದಿನ ಈ ಶವಗಳಿಗೆ ಜೀವ ಬರಬಹುದೆಂದು ಸಂಶೋಧನೆಗಳನ್ನ ಮಾಡುತ್ತಿದೆ.

Advertisement

ಇನ್ನು ಕ್ರಯೋನಿಸ್​​ ಅಂದ್ರೆ ಏನು ಅಂತಾ ನೋಡ್ತಾ ಹೋಗೋದಾದ್ರೆ, ಜೀವಂತ ಕೋಶಗಳನ್ನ ಅಂಗಾಂಶಗಳನ್ನ ಮತ್ತು ಜೈವಿಕ ವಸ್ತುಗಳನ್ನ ಕನಿಷ್ಠ ತಾಪಮಾನದಲ್ಲಿ ಸಂಗ್ರಹಿಸಿಟ್ಟುಕೊಳ್ಳುವ ಮತ್ತು ಘನೀಕರಿಸುವ ವಿಧಾನ. ಪ್ರಯೋಗಾಲಯಗಳಲ್ಲಿ 196 ಡಿಗ್ರಿ ಸೆಲ್ಸಿಯಸ್​​​ನಲ್ಲಿ ಇಲ್ಲಿ ಮೃತದೇಹವನ್ನ ಸಂಗ್ರಹ ಮಾಡಲಾಗುತ್ತೆ. ವಯಸ್ಸಾಗಿ ಮತ್ತು ರೋಗವಿಲ್ಲದೇ ಸತ್ತವರನ್ನ ಭವಿಷ್ಯದ ತಂತ್ರಜ್ಞಾನದ ಮೂಲಕ ಮತ್ತೆ ಬದುಕಿಸಬಹುದು ಎಂಬ ವಿಶ್ವಾಸ ಆಲ್ಕರ್​ ಕಂಪನಿಯದ್ದಾಗಿದೆ. ಈ ನಿಟ್ಟಿನಲ್ಲಿ ಅನೇಕ ಸಂಶೋಧನೆಗಳೂ ನಡೆಯುತ್ತಿವೆ. ಈ ಕುರಿತಂತೆ 500ಕ್ಕೂ ಹೆಚ್ಚು ಮಂದಿ ಸಂಶೋಧನೆಯನ್ನ ಮಾಡುತ್ತಿದ್ದಾರೆ. ಶ್ರೀಮಂತರಂತೂ ದೇಹಗಳನ್ನ ಇಲ್ಲಿ ಸಂರಕ್ಷಿಸಲು ಮುಗಿ ಬಿದ್ದಿದ್ದಾರೆ.

ಮೃತ ದೇಹ ಸಂಗ್ರಹಿಸಲು ಬೇಕು ಕೋಟಿ ಕೋಟಿ ದುಡ್ಡು:
ಸತ್ತ ವ್ಯಕ್ತಿಗಳ ಮೇತದೇಹವನ್ನ ಕಂಪನಿ ಸುಮ್ಮನೆ ಇಟ್ಟುಕೊಂಡಿರದಿಲ್ಲ ಅದಕ್ಕಾಗಿಯೇ ಆಲ್ಕೋರ್​ (Alcor) ಕಂಪನಿ ಫಂಡ್​ ವ್ಯವಸ್ಥೆಯನ್ನೂ ಮಾಡಿದೆ. ಹೀಗಾಗಿ ಸತ್ತ ವ್ಯಕ್ತಿಯ ದೇಹವನ್ನ ಈ ರೀತಿ ಸಂರಕ್ಷಿಸಲು ಕೋಟಿ ಕೋಟಿ ರೂಪಾಯಿಗಳ ಬೇಕು. ಅಂದರೆ ಸಂಪೂರ್ಣ ದೇಹದ ಸಂರಕ್ಷಣೆಗೆ 2 ಕೋಟಿ ರೂ. ಕಟ್ಟಬೇಕು. ಮೆದುಳನ್ನ ಸಂಗ್ರಹಿಸುವ ನ್ಯೂರೋ ಕ್ರಯೋ ಪ್ರಿಸರ್ವೇಶನ್​ಗೆ 66 ಲಕ್ಷ ರೂಪಾಯ ಖರ್ಚಾಗುತ್ತೆ ಅಂತಾ ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.

ಒಟ್ಟಾರೆಯಾಗಿ ಸತ್ತ ಜೀವಕ್ಕೆ ಜೀವ ಕೊಡುವ ಸಂಶೋಧನೆಗೆ ಈ ಕಂಪೆನಿ ನಿರಂತರ ಪ್ರಯೋಗಗಳನ್ನ ಮಾಡುತ್ತಿದೆ. ಮೃತದೇಹ ಸಂರಕ್ಷಿಸಲು ಕೊಡುವ ಹಣದಲ್ಲಿ ಒಂದು ಭಾಗ ಕಂಪನಿಯ ಟ್ರಸ್ಟಿಗೆ ಹೋದ್ರೆ ಅದರ ಅರ್ಧ ಭಾಗ ಸಂಶೋಧನೆಗಾಗಿ ಮೀಸಲಿಡಲಾಗುತ್ತೆ.

Advertisement
Advertisement
Advertisement