Ambani Family: ಇಷ್ಟೆಲ್ಲಾ ಓದಿದಾರ ಅಂಬಾನಿ ಕುಟುಂಬದವರು : ಅಂಬಾನಿ ಕುಟುಂಬ ಸದಸ್ಯರ ಶೈಕ್ಷಣಿಕ ಅರ್ಹತೆಗಳು ಎಲ್ಲರನ್ನು ಅಚ್ಚರಿಗೀಡು ಮಾಡಿವೆ : ನೀವು ಒಮ್ಮೆ ನೋಡಿ
ಬಹುಶಃ ಇಡೀ ಭಾರತದ ಉದ್ಯಮ ಜಗತ್ತಿನ ಅಧಿಪತಿ ಎಂದು ಕರೆಸಿಕೊಳ್ಳುವ ಏಕೈಕ ಹೆಸರೆಂದರೆ ಅದು ಅಂಬಾನಿ. ಈ ಅಂಬಾನಿ ಕುಟುಂಬವು ಭಾರತದ ಅತ್ಯಂತ ಪ್ರಭಾವಶಾಲಿ ಮತ್ತು ಶ್ರೀಮಂತ ಕುಟುಂಬಗಳಲ್ಲಿ ಒಂದೆನಿಸಿದೆ. ಅವರ ಒಕ್ಕೂಟವಾದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್, ಪೆಟ್ರೋಕೆಮಿಕಲ್ಸ್, ದೂರಸಂಪರ್ಕ, ಸೇರಿದಂತೆ ವಿವಿಧ ವಲಯಗಳನ್ನು ವ್ಯಾಪಿಸಿದೆ. ಮುಖೇಶ್ ಅವರ ದೂರದೃಷ್ಟಿ, ಮತ್ತು ಅವರ ನಾಯಕತ್ವದಿಂದಾಗಿ ರಿಲಯನ್ಸ್ ನ ಅಭೂತಪೂರ್ವ ಯಶಸ್ಸಿಗೆ ಕಾರಣವಾಗಿದೆ. ಈ ಮೂಲಕ ವ್ಯಾಪಾರ ಜಗತ್ತಿನಲ್ಲಿ ಜಾಗತಿಕ ನಾಯಕನಾಗಿಯು ಗುರುತಿಸಿಕೊಂಡಿದ್ದಾರೆ.
ಮುಖೇಶ್ ಅವರ ಪತ್ನಿ, ನೀತಾ ಅಂಬಾನಿ, ಭಾರತದಲ್ಲಿ ಶಿಕ್ಷಣ ಮತ್ತು ಕ್ರೀಡಾ ಅಭಿವೃದ್ಧಿಗೆ ಹೆಚ್ಚಿನ ಕೊಡುಗೆ ನೀಡಿದ್ದಾರೆ. ಅವರ ಮಕ್ಕಳಾದ ಆಕಾಶ್, ಇಶಾ ಮತ್ತು ಅನಂತ್ ಮುಂದಿನ ಪೀಳಿಗೆಯಾಗಿ ಅಂಬಾನಿ ಕುಟುಂಬವನ್ನು ಪ್ರತಿನಿಧಿಸುತ್ತಾರೆ. ಈ ಮೂರು ಜನ ಮಕ್ಕಳು ಕುಟುಂಬದ ಪರಂಪರೆಯನ್ನು ಮುನ್ನಡೆಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ ಮತ್ತು ತಮ್ಮ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.
ಇನ್ನು ಇವರ ವಿದ್ಯಾಭ್ಯಾಸದ ಕುರಿತು ನೋಡುವುದಾದರೆ
ಮುಕೇಶ್ ಅಂಬಾನಿ:
ಮುಕೇಶ್ ಅಂಬಾನಿ ಅವರು ಮುಂಬೈ ವಿಶ್ವವಿದ್ಯಾಲಯದಿಂದ ಬ್ಯಾಚುಲರ್ ಆಫ್ ಕೆಮಿಕಲ್ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ ಹಾಗೆಯೇ ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯದಿಂದ ಎಂಬಿಎ ಪದವಿಯನ್ನು ಪಡೆದಿದ್ದಾರೆ. ಅವರು ಮುಂಬೈನ ಹಿಲ್ ಗ್ರೇಂಜ್ ಪ್ರೌಢಶಾಲೆಯಿಂದ ತಮ್ಮ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ್ದರು ಮತ್ತು ಶಾಲೆಯನ್ನು ಮುಗಿಸಿದ ನಂತರ ಮುಂಬೈನ ಸೇಂಟ್ ಕ್ಸೇವಿಯರ್ ಕಾಲೇಜಿಗೆ ಸೇರಿದರು. ಅವರು 1980ರಲ್ಲಿ ರಿಲಯನ್ಸ್ ಕಂಪನಿಗೆ ಅಧಿಕೃತವಾಗಿ .
ನೀತಾ ಅಂಬಾನಿ:
ಮುಕೇಶ್ ಅಂಬಾನಿಯವರ ಪತ್ನಿ, ನೀತಾ ಅಂಬಾನಿ, ಮುಂಬೈನ ನರ್ಸೀ ಮೊಂಜಿ ಕಾಲೇಜ್ ಆಫ್ ಕಾಮರ್ಸ್ ಅಂಡ್ ಎಕನಾಮಿಕ್ಸ್ನಿಂದ ಬ್ಯಾಚುಲರ್ ಆಫ್ ಕಾಮರ್ಸ್ ಪದವಿ ಪಡೆದಿದ್ದಾರೆ. ನೀತಾ ಅಂಬಾನಿ ಒಬ್ಬ ತರಬೇತಿ ಪಡೆದ ಭರತನಾಟ್ಯ ನೃತ್ಯಗಾರ್ತಿಯಾಗಿದ್ದಾರೆ. ಆಕೆ ತಮ್ಮ ವೃತ್ತಿಜೀವನದ ಆರಂಭಿಕ ದಿನಗಳಲ್ಲಿ ಶಿಕ್ಷಕರಾಗಿಯೂ ಕೆಲಸ ಮಾಡಿದ್ದರು.
ಆಕಾಶ್ ಅಂಬಾನಿ:
ಇನ್ನು ಮುಖೇಶ್ ಮತ್ತು ನೀತಾ ಅಂಬಾನಿಯವರ ಹಿರಿಯ ಮಗ ಆಕಾಶ್ ಅಂಬಾನಿ ಅಮೆರಿಕದ ಬ್ರೌನ್ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ. ಅವರು ತಮ್ಮ ಶಾಲಾ ಶಿಕ್ಷಣವನ್ನು ಮುಂಬೈನ ಧೀರುಭಾಯ್ ಅಂಬಾನಿ ಇಂಟರ್ನ್ಯಾಷನಲ್ ಶಾಲೆಯಲ್ಲಿ ಪೂರ್ಣಗೊಳಿಸಿದ್ದಾರೆ.
ಇಶಾ ಅಂಬಾನಿ:
ಆಕಾಶ್ ಅಂಬಾನಿಯವರ ಸಹೋದರಿ ಇಶಾ ಅಂಬಾನಿ ಯೇಲ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದ್ದು, ಅಲ್ಲಿ ಅವರು ಮನೋವಿಜ್ಞಾನ ಮತ್ತು ದಕ್ಷಿಣ ಏಷ್ಯಾ ಅಧ್ಯಯನಗಳನ್ನು ಅಧ್ಯಯನ ಮಾಡಿದ್ದಾರು. ಧೀರೂಭಾಯಿ ಅಂಬಾನಿ ಇಂಟರ್ನ್ಯಾಷನಲ್ ಸ್ಕೂಲ್ ನ ಹಳೆಯ ವಿದ್ಯಾರ್ಥಿಯಾಗಿರುವ ಇಶಾ, ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯದಿಂದ ಎಂಬಿಎ ಪದವಿ ಪಡೆದಿದ್ದಾರೆ.
ಅನಂತ್ ಅಂಬಾನಿ
ಇನ್ನೂ ಮುಕೇಶ್ ಮತ್ತು ನೀತಾ ಅಂಬಾನಿಯವರ ಕಿರಿಯ ಮಗನಾದ ಅನಂತ್ ಅಂಬಾನಿ ಬ್ರೌನ್ ವಿಶ್ವವಿದ್ಯಾನಿಲಯದಲ್ಲಿ ವ್ಯಾಸಂಗ ಮಾಡಿದ್ದು, ತನ್ನ ಒಡಹುಟ್ಟಿದವರಂತೆಯೇ, ಅನಂತ್ ತನ್ನ ಶಾಲಾ ಶಿಕ್ಷಣವನ್ನು ಧೀರೂಭಾಯಿ ಅಂಬಾನಿ ಇಂಟರ್ನ್ಯಾಷನಲ್ ಶಾಲೆಯಿಂದ ಪೂರ್ಣಗೊಳಿಸಿದ್ದರು.