Amazon package Viral video: ಅಮೆಜಾನ್‌ನಲ್ಲಿ ಆರ್ಡರ್ ಮಾಡಿದ್ದು ಒಂದು, ಬಂದಿದ್ದು ಜೀವಂತ ವಿಷಕಾರಿ ಹಾವು!
Amazon package Viral video: ಆನ್ಲೈನ್ ಶಾಪಿಂಗ್ ಅಂದ್ರೆ ಎಲ್ಲರಿಗೂ ಕಂಫರ್ಟ್ ಜೋನ್ ಆಗಿದೆ. ಯಾಕಂದ್ರೆ ಕಡಿಮೆ ಬೆಲೆಯಲ್ಲಿ ಬೇಕು ಬೇಕಾದ ಆಯ್ಕೆ ಗಳು ಲಭ್ಯ ಇದ್ದಾಗ ನಗರದಲ್ಲಿ ಹತ್ತಾರು ಶಾಪ್ ಸುತ್ತುವ ಕೆಲಸ ತಪ್ಪುತ್ತೆ, ಟೈಮ್ ಉಳಿಯುತ್ತೆ, ಟ್ರಾವೆಲ್ ಖರ್ಚು ಉಳಿಯುತ್ತೆ. ಒಟ್ಟಿನಲ್ಲಿ ಆನ್ಲೈನ್ ಶಾಪಿಂಗ್ ಬೆಸ್ಟ್ ಅಂತಾರೆ ಬಹುತೇಕರು.
ಆದ್ರೆ ಆನ್ಲೈನ್ ಶಾಪಿಂಗ್ ಪ್ರಿಯರಿಗೆ ಇಲ್ಲೊಂದು ಶಾಕಿಂಗ್ ನ್ಯೂಸ್ ಇದೆ. ಹೌದು ನೀವು ಆರ್ಡರ್ ಮಾಡಿರುವುದು ಬಿಟ್ಟು ಬೇರೆ ವಸ್ತು ಬಂದರೆ ಅದನ್ನು ಬದಲಿಸಬಹುದು. ಆದರೆ, ಡಿಲಿವರಿ ಬಾಕ್ಸ್‌ನಲ್ಲಿ ಡೇಂಜರ್ ಜೀವಿ ಇದ್ರೆ ಏನ್ ಮಾಡೋದು ಹೇಳಿ? ಹೌದು, ಎಕ್ಸ್‌ಬಾಕ್ಸ್ ಕಂಟ್ರೋಲರ್ ಅರ್ಡರ್ ಮಾಡಿದ್ದ ದಂಪತಿಗೆ ಅಮೆಜಾನ್ ಬಾಕ್ಸ್‌ನಲ್ಲಿ ಬಂದಿದ್ದು ಮಾತ್ರ ಜೀವಂತ ನಾಗರ ಹಾವು.
ಈ ಘಟನೆ ನಡೆದಿರುವುದು ಬೇರೆಲ್ಲೂ ಅಲ್ಲ. ನಮ್ಮ ಸಿಲಿಕಾನ್ ಸಿಟಿ ಬೆಂಗಳೂರುನಲ್ಲಿ. ದಂಪತಿಗಳಿಗೆ ಬಂದ ಅಮೆಜಾನ್ ಪ್ಯಾಕೇಜ್‌ನಲ್ಲಿ ಜೀವಂತ ನಾಗರಹಾವು ಕಂಡುಬಂದಿದ್ದು, ಈ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ಸಕತ್ ವೈರಲ್ (Amazon package Viral video) ಆಗಿದೆ.
ಮಾಹಿತಿ ಪ್ರಕಾರ, ಬೆಂಗಳೂರಿನ ಸರ್ಜಾಪುರ ರಸ್ತೆಯಲ್ಲಿ ವಾಸವಿರುವ ಇಂಜಿನಿಯರ್ ದಂಪತಿ ಆನ್‌ಲೈನ್ ವಿತರಣಾ ಪ್ಲಾಟ್‌ಫಾರ್ಮ್ ಅಮೆಜಾನ್‌ನಲ್ಲಿ ಎಕ್ಸ್‌ಬಾಕ್ಸ್ ಕಂಟ್ರೋಲರ್ ಅನ್ನು ಆರ್ಡರ್ ಮಾಡಿದ್ದರು. ಆದರೆ, ಅವರು ಪ್ಯಾಕೇಜ್ ಸ್ವೀಕರಿಸಿದಾಗ ಮಾತ್ರ ಪಾರ್ಸಲ್‌ನಲ್ಲಿ ಇದ್ದದ್ದು ನಾಗರಹಾವು.
ದಂಪತಿಗಳ ಹೇಳಿದ ಪ್ರಕಾರ, "ನಾವು ಅಮೆಜಾನ್‌ನಿಂದ 2 ದಿನಗಳ ಹಿಂದೆ ಎಕ್ಸ್‌ಬಾಕ್ಸ್ ಕಂಟ್ರೋಲರ್ನ್ನು ಆರ್ಡರ್ ಮಾಡಿದ್ದೇವು. ಅಮೆಜಾನ್‌ನಿಂದ ಬಂದ ಪ್ಯಾಕೇಜ್‌ನಲ್ಲಿ ಜೀವಂತ ಹಾವು ಬಂದಿದೆ. ಪ್ಯಾಕೇಜ್ ಅನ್ನು ನೇರವಾಗಿ ಡಿಲೆವರಿ ಪಾರ್ಟ್ನರ್ ನಮಗೆ ನೀಡಿದ್ದಾರೆ. ಅವರು ಹೊರಗೆ ಇಟ್ಟು ಹೋಗಿಲ್ಲ. ಇಡೀ ಘಟನೆಯನ್ನು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದೇವೆ, ಜೊತೆಗೆ ನಮ್ಮಲ್ಲಿ ಪ್ರತ್ಯಕ್ಷದರ್ಶಿಗಳು ಇದ್ದಾರೆ" ಎಂದು ಪಡೆದ ಗ್ರಾಹಕರು ತಿಳಿಸಿದ್ದಾರೆ.
ಪಾರ್ಸಲ್‌ನಲ್ಲಿ ಇರುವ ಹಾವಿನ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅರ್ಧ ತೆರೆದಿರುವ ಅಮೆಜಾನ್ ಪ್ಯಾಕೇಜ್ ಅನ್ನು ಬಕೆಟ್‌ನೊಳಗೆ ಇರಿಸಿರುವುದನ್ನು ವೀಡಿಯೊದಲ್ಲಿ ನೋಡಬಹುದು. ಪ್ಯಾಕೇಜಿಂಗ್ ಟೇಪ್‌ನಲ್ಲಿ ಸಿಲುಕಿರುವ ಹಾವು ಅಲುಗಾಡುತ್ತಿದೆ ಮತ್ತು ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಹಾವನ್ನು ಸೆರೆಹಿಡಿದು ನಂತರ ಜನರ ಕೈಗೆ ಸಿಗದಂತೆ ಸುರಕ್ಷಿತ ಸ್ಥಳಕ್ಕೆ ಬಿಡಲಾಗಿದೆ ಎಂದು ತಿಳಿದುಬಂದಿದೆ.