For the best experience, open
https://m.hosakannada.com
on your mobile browser.
Advertisement

Alcohol price hike : ಎಣ್ಣೆ ಪ್ರಿಯರಿಗೆ ಮತ್ತೆ ಶಾಕ್ - ಸಿದ್ದು ಸರ್ಕಾರದಿಂದ ಮಹತ್ವದ ನಿರ್ಧಾರ !!

Alcohol Price Hike: ಸರ್ಕಾರವು ಮಹತ್ವದ ನಿರ್ಧಾರ ಮಾಡಿದ್ದು ಲೋಕಸಭಾ ಚುನಾವಣೆ ಮುಗಿಯುತ್ತಿದ್ದಂತೆ ಮದ್ಯ ಪ್ರಿಯರಿಗೆ ದೊಡ್ಡ ಆಘಾತ ನೀಡಲು ತಯಾರಿ ನಡೆಸಿದೆ.
01:13 PM May 18, 2024 IST | ಸುದರ್ಶನ್
UpdateAt: 01:27 PM May 18, 2024 IST
alcohol price hike   ಎಣ್ಣೆ ಪ್ರಿಯರಿಗೆ ಮತ್ತೆ ಶಾಕ್   ಸಿದ್ದು ಸರ್ಕಾರದಿಂದ ಮಹತ್ವದ ನಿರ್ಧಾರ

Alcohol price hike: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಮದ್ಯ ಪ್ರಿಯರಿಗೆ ಶಾಕ್ ಮೇಲೆ ಶಾಕ್ ನೀಡುತ್ತಲೇ ಇದೆ. ಅಂತೆಯೇ ಇದೀಗ ಸಿದ್ದರಾಮಯ್ಯ(CM Siddaramaiah) ಸರ್ಕಾರವು(Karnataka Government)) ಮಹತ್ವದ ನಿರ್ಧಾರ ಮಾಡಿದ್ದು ಲೋಕಸಭಾ ಚುನಾವಣೆ ಮುಗಿಯುತ್ತಿದ್ದಂತೆ ಮದ್ಯ ಪ್ರಿಯರಿಗೆ ದೊಡ್ಡ ಆಘಾತ ನೀಡಲು ತಯಾರಿ ನಡೆಸಿದೆ.

Advertisement

ಇದನ್ನೂ ಓದಿ: Anganawadi Teacher: ಊರಿಗೆ ಹೊರಟ ಅಂನಗವಾಡಿ ಶಿಕ್ಷಕಿಯ ಬಸ್‌ ಮಿಸ್‌, ಬೈಕ್‌ನಲ್ಲಿ ಹೋದ ಶಿಕ್ಷಕಿಯ ದಾರುಣ ಕೊಲೆಮಾಡಿದ ದುರುಳರು

ಹೌದು, ರಾಜ್ಯದಲ್ಲಿ ಯಾವುದೇ ರೀತಿಯ ಆರ್ಥಿಕ ಸಂಕಷ್ಟ ಎದುರಾದರೆ, ಯಾವುದಾದರು ಸರ್ಕಾರದ ಯೋಜನೆಗಳಿಗೆ, ಅಭಿವೃದ್ಧಿ ಕಾರ್ಯಗಳಿಗೆ ಹಣಕಾಸಿನ ಸಮಸ್ಯೆ ಅಡ್ಡಿಯಾದರೆ ಮೊದಲು ಬಲಿಪಶುಗಳಾಗುವುದು ಮದ್ಯಪ್ರಿಯರು. ತಮಗೆ ಬೇಕಾಗುವ ಹಣವನ್ನು ಸರ್ಕಾರ ಈ ಮೂಲಕವೇ ವಸೂಲಿ ಮಾಡುವುದು. ಅದರಲ್ಲೂ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಸರ್ಕಾರದ ಬೊಕ್ಕಸ ಕಾಲಿಯಾಗಿ ಅಭಿವೃದ್ಧಿ ಕೆಲಸ ಕುಂಟಿತವಾದಾಗ ಅತೀವವಾಗಿ ಬಳಲಿದ್ದೇ ಈ ಎಣ್ಣೆ ಪ್ರಿಯರು. ಯಾಕೆಂದರೆ ಆಗ ಒಮ್ಮಿಂದೊಮ್ಮೆಲೆ ಎಲ್ಲಾ ಬ್ರಾಂಡ್ ಗಳಿಂದ ಹಿಡಿದು, ಬೀರ್-ಬಾಟಲ್ ಸೇರಿ ಅವುಗಳ ಬೆಲೆ ಗಗನಕ್ಕೇರಿತು. ಕುಡಿದ ಮೇಲೆ ಕೈ ನಡುಗುವ ಬದಲು, ಕೊಳ್ಳುವಾಗಲೇ ಕೈ ನಡುಗುತ್ತಿತ್ತು. ಎಷ್ಟೇ ರೇಟ್ ಏರಿಸಿದರು ಇವರು ಕುಡಿದೇ ಕುಡಿಯುತ್ತಾರೆ, ರಾಜ್ಯದ ಬೊಕ್ಕಸಕ್ಕೆ ಹರಿದು ಬರುವ ಆದಾಯದಲ್ಲಿ ಸಿಂಹಪಾಲಿರುವುದು ಅಬಕಾರಿ ಇಲಾಖೆಗೆ ಎಂದು ತಿಳಿದಿರುವ ಸರ್ಕಾರ ತಾನು ಸಂಕಷ್ಟಕ್ಕೆ ಸಿಲುಕಿದಾಗ ಮುದ್ಯಪ್ರಿಯರನ್ನೂ ಸಂಕಷ್ಟಕ್ಕೆ ಸಿಲುಕಿಸಲು ಶತಸಿದ್ದವಾಗಿರುತ್ತದೆ. ಅಂತೆಯೇ ಇದೀಗ ಮತ್ತೆ ಸುರಪಾನಪ್ರಿಯರಿಗೆ ದೊಡ್ಡ ಆಘಾತವೇ ಕಾದಿದೆ ಎನ್ನಬಹುದು.

Advertisement

ಇದನ್ನೂ ಓದಿ: Skin Care Tips: ಬೊಟೊಕ್ಸ್ ಉತ್ತಮ ಅಥವಾ ಡರ್ಮಲ್ ಫಿಲ್ಲರ್ ಯಾವುದು ಚರ್ಮಕ್ಕೆ ಸೂಕ್ತ? ಬಜೆಟ್‌ ಎಷ್ಟು?

ಯಸ್, ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿ(Congress Guarantees) ಯೋಜನೆಗಳಿಗೆ ಹಣ ಒದಗಿಸಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಈ ಯೋಜನೆಗಳಿಗೆ ಆರ್ಥಿಕ ಬಿಕ್ಕಟ್ಟು ಉಂಟಾಗದಂತೆ, ಯೋಜನೆಗಳಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ತಡೆಯಲು ಮತ್ತೆ ಮದ್ಯದ ಬೆಲೆಯನ್ನು ಹೆಚ್ಚಿಸಲು ಸರ್ಕಾರ ಸದ್ದಿಲ್ಲದೆ ಯೋಜನೆಗಳನ್ನು ರೂಪಿಸುತ್ತಿದೆ. ರಾಜ್ಯ ಮದ ನೆರೆಯ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಮದ್ಯದ ದರ ತುಂಬಾ ಕಡಿಮೆ. ಹೀಗಾಗಿ ಈ ಮಾರ್ಗವನ್ನು ಬಳಸಿಯೇ ಸರ್ಕಾರ ಮದ್ಯಪ್ರಿಯರಿಗೆ ಶಾಕ್ ನೀಡಲು ತೆರೆಮರೆಯಲ್ಲಿ ತಯಾರಿ ಶುರುಮಾಡಿದೆ. ಒಟ್ಟಿನಲ್ಲಿ ಲೋಕಸಭೆ ಚುನಾವಣೆಯ(Parliament Election) ನಂತರ ನೆರೆಯ ರಾಜ್ಯಗಳ ಬೆಲೆಗಳನ್ನು ನೋಡಿ ಕರ್ನಾಟಕದಲ್ಲಿ ಮದ್ಯದ ಬೆಲೆಯನ್ನು ಹೆಚ್ಚಳ( Alcohol price hike)ಮಾಡಲು ಉದ್ದೇಶಿಸಿದೆ.

ಕಾಂಗ್ರೆಸ್ ಅವಧಿಯಲ್ಲಿ 3 ಸಲ ಏರಿಕೆ ಕಂಡ ಮದ್ಯ ಬೆಲೆ:

2023 ರ ವಿಧಾನಸಭಾ ಚುನಾವಣೆಯ ನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರವು ಈಗಾಗಲೇ ಮೂರು ಬಾರಿ ಬಿಯರ್ ಬೆಲೆಯನ್ನು ಹೆಚ್ಚಿಸಿದೆ. ಆರಂಭದಲ್ಲಿ ಶೇ.20ರಷ್ಟು ಹೆಚ್ಚುವರಿ ಸುಂಕ ವಿಧಿಸಲಾಗಿದ್ದು, ನಂತರ ಹೆಚ್ಚುವರಿ ಅಬಕಾರಿ ಸುಂಕವನ್ನು (ಎಇಡಿ) 185 ರಿಂದ ಶೇ.195ಕ್ಕೆ ಹೆಚ್ಚಿಸಲಾಗಿದೆ. ಇದರ ಪರಿಣಾಮವಾಗಿ ಬಿಯರ್ ಬೆಲೆಗಳು ಪ್ರತಿ ಬಾಟಲಿಗೆ ರೂ 8 ರಿಂದ 15 ರೂಪಾಯಿಯಷ್ಟು ಏರಿಕೆಯಾಯಿತು. ಕಳೆದ ಏಳೆಂಟು ತಿಂಗಳುಗಳಲ್ಲಿ ಬಿಯರ್ ಬೆಲೆಯು ಪ್ರತಿ ಬಾಟಲಿಗೆ ಸುಮಾರು 40 ರೂ.ಗಳಷ್ಟು ಏರಿಕೆಯಾಗಿದೆ.

Advertisement
Advertisement
Advertisement