ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Alchohal In Online: ಎಣ್ಣೆಪ್ರಿಯರಿಗೆ ಸಿಹಿ ಸುದ್ದಿ; ಕರ್ನಾಟಕ ಸೇರಿ 7 ರಾಜ್ಯಗಳಲ್ಲಿ ಆನ್‌ಲೈನ್ನಲ್ಲಿ ಸಿಗಲಿದೆ ಆಲ್ಕೋಹಾಲ್

Alchohal In Online: ಎಣ್ಣೆಪ್ರಿಯರಿಗೆ ಗುಡ್‌ನ್ಯೂಸ್‌ ಕರ್ನಾಟಕ ಸೇರಿ ನವದೆಹಲಿ, ಹರ್ಯಾಣ, ಪಂಜಾಬ್‌, ತಮಿಳುನಾಡು, ಗೋವಾ, ಕೇರಳ ರಾಜ್ಯಗಳು ಗ್ರಾಹಕರಿಗೆ ಮನೆ ಬಾಗಿಲಿಗೆ ಬರಲಿದೆ ಮದ್ಯ.
12:23 PM Jul 16, 2024 IST | ಸುದರ್ಶನ್
UpdateAt: 12:23 PM Jul 16, 2024 IST
Advertisement

Alchohal In Online: ಎಣ್ಣೆಪ್ರಿಯರಿಗೆ ಗುಡ್‌ನ್ಯೂಸ್‌ ಕರ್ನಾಟಕ ಸೇರಿ ನವದೆಹಲಿ, ಹರ್ಯಾಣ, ಪಂಜಾಬ್‌, ತಮಿಳುನಾಡು, ಗೋವಾ, ಕೇರಳ ರಾಜ್ಯಗಳು ಗ್ರಾಹಕರಿಗೆ ಮನೆ ಬಾಗಿಲಿಗೆ ಬರಲಿದೆ ಮದ್ಯ. ಆನ್‌ಲೈನ್‌ ಮಾರುಕಟ್ಟೆ ವೇದಿಕೆಗಳಾದ ಸ್ವಿಗ್ಗಿ, ಬಿಗ್‌ಬಾಸ್ಕೆಟ್‌ ಹಾಗೂ ಜೊಮ್ಯಾಟೋ, ಬ್ಲಿಂಕಿಟ್‌ ಮುಂತಾದ ವಾಣಿಜ್ಯ ಮಾರುಕಟ್ಟೆಯ ಮೂಲಕ ಗ್ರಾಹಕರು ಮನೆ ಬಾಗಿಲಿಗೆ ಮದ್ಯ ತಲುಪಿಸುವ ಪ್ರಾಯೋಗಿಕ ಯೋಜನೆ ಇದೆ.

Advertisement

ಬೀರ್‌, ವೈನ್‌, ಲಿಕ್ಕರ್‌ ಮುಂತಾದವುಗಳನ್ನು ಮನೆ ಬಾಗಿಲಿಗೆ ಪೂರೈಕೆ ಮಾಡಲು ಪ್ರಾಯೋಗಿಕ ಯೋಜನೆ ರೂಪಿಸಲಾಗುತ್ತಿದೆ.

Reservation: ನಾಡಿನ ಜನತೆಗೆ ಭರ್ಜರಿ ಸುದ್ದಿ, ಇನ್ಮುಂದೆ ರಾಜ್ಯದ ಖಾಸಗಿ ಕಂಪೆನಿಗಳಲ್ಲೂ ಕನ್ನಡಿಗರಿಗೆ ಸಿಗಲಿದೆ 100% ಮೀಸಲಾತಿ !!

Advertisement

ಸದ್ಯಕ್ಕೆ ಒಡಿಶಾ, ಪಶ್ಚಿಮ ಬಂಗಾಳದಲ್ಲಿ ಮದ್ಯ ಮನೆ ಬಾಗಿಲಿಗೆ ಪೂರೈಕೆ ಮಾಡಲಾಗುತ್ತಿದ್ದು, ಇತರ ರಾಜ್ಯಗಳಲ್ಲಿ ಮಾರಾಟ ತರುವ ಬಗ್ಗೆ ಸಾಧಕ, ಬಾಧಕಗಳ ಕುರಿತು ತಿಳಿಯಲು ಹರ್ಯಾಣ, ಪಂಜಾಬ್‌, ತಮಿಳುನಾಡು, ಗೋವಾ, ಕೇರಳ ರಾಜ್ಯಗಳಲ್ಲಿ ಕಡಿಮೆ ಅಮಲು ಇರುವಂತಹ ಮದ್ಯವನ್ನು ಮನೆ ಬಾಗಿಲಿಗೆ ತಲುಪಿಸಿ ಇದರ ಪ್ರತಿಕ್ರಿಯೆ ಹೇಗಿದೆ? ಎಂದು ತಿಳಿದುಕೊಳ್ಳುವ ಕುರಿತು ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಮಹಿಳೆಯರು ಕೂಡಾ ಡ್ರಿಂಕ್ಸ್‌ ಮಾಡುವುದರಿಂದ ಮದ್ಯದಂಗಡಿಗೆ ಹೋಗಿ ಮದ್ಯ ಖರೀದಿ ಮಾಡಲೆಂದು ಹೋಗುವಾಗ ಒಂಥರಾ ನೋಡುತ್ತಾರೆ ಎನ್ನುವ ಅಭಿಪ್ರಾಯಗಳ ಹಿನ್ನೆಲೆಯಲ್ಲಿ ವಿಶೇಷವಾಗಿ ಮಹಾನಗರಗಳಲ್ಲಿ ಹೆಚ್ಚುತ್ತಿರುವ ವಲಸಿಗ ಜನಸಂಖ್ಯೆಗೆ ಮದ್ಯ ಪೂರೈಸುವುದಾಗಿ ಈ ಆನ್‌ಲೈನ್‌ ಮದ್ಯ ಡೆಲಿವರಿ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ಹೇಳಿರುವ ಕುರಿತು ವರದಿಯಾಗಿದೆ.

ಆನ್‌ಲೈನ್‌ನಲ್ಲಿ ಮದ್ಯ ಡೆಲಿವರಿ ಪಡೆಯುವುದಕ್ಕೆ ಹಲವು ನಿಯಮಗಳಿದೆ. ಎಂಡ್‌ ಟೂ ಎಂಡ್‌ ವಹಿವಾಟು ದಾಖಲೆ, ಮದ್ಯ ಆರ್ಡರ್‌ ಮಾಡುವ ವ್ಯಕ್ತಿಯ ವಯಸ್ಸು ಇವುಗಳು ಮುಖ್ಯವಾಗಿದೆ. ಮದ್ಯ ಆರ್ಡರ್‌ ಮಾಡುವುದಕ್ಕೂ ಲಿಮಿಟ್‌ ನಿಗದಿಪಡಿಸಲಾಗಿದೆ. ಡ್ರೈ ಡೇಗಳಲ್ಲಿ ಮದ್ಯ ಸಿಗುವುದಿಲ್ಲ ಎಂಬ ನಿಯಮಗಳನ್ನು ಪಾಲಿಸಲಾಗುತ್ತದೆ.

Gauri Lankesh: ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣ; ಆರೋಪಿಗಳಿಗೆ ಜಾಮೀನು ಮಂಜೂರು

Related News

Advertisement
Advertisement