For the best experience, open
https://m.hosakannada.com
on your mobile browser.
Advertisement

Airtel ಗ್ರಾಹಕರಿಗೆ ಬೊಂಬಾಟ್ ನ್ಯೂಸ್, ಅತೀ ಕನಿಷ್ಠ ಬೆಲೆಗೆ 365 ದಿನದ ಪ್ಲಾನ್ ಘೋಷಿಸಿದ ಸಂಸ್ಥೆ !! ಏನೇನು ಪ್ರಯೋಜನ ಇದೆ ಗೊತ್ತಾ?!

Airtel: ದೇಶದ ಪ್ರಮುಖ ಟೆಲಿಕಾಂ ಕಂಪನಿಗಳು ಇತ್ತೀಚೆಗೆ ತನ್ನ ಎಲ್ಲಾ ರಿಚಾರ್ಜ್‌ ಪ್ಲ್ಯಾನ್‌ಗಳ ಹೆಚ್ಚಳವನ್ನು ಘೋಷಣೆ ಮಾಡಿದ್ದವು.
01:55 PM Jul 19, 2024 IST | ಸುದರ್ಶನ್
UpdateAt: 01:55 PM Jul 19, 2024 IST
airtel ಗ್ರಾಹಕರಿಗೆ ಬೊಂಬಾಟ್ ನ್ಯೂಸ್  ಅತೀ ಕನಿಷ್ಠ ಬೆಲೆಗೆ 365 ದಿನದ ಪ್ಲಾನ್ ಘೋಷಿಸಿದ ಸಂಸ್ಥೆ    ಏನೇನು ಪ್ರಯೋಜನ ಇದೆ ಗೊತ್ತಾ
Advertisement

Airtel: ದೇಶದ ಪ್ರಮುಖ ಟೆಲಿಕಾಂ ಕಂಪನಿಗಳು ಇತ್ತೀಚೆಗೆ ತನ್ನ ಎಲ್ಲಾ ರಿಚಾರ್ಜ್‌ ಪ್ಲ್ಯಾನ್‌ಗಳ ಹೆಚ್ಚಳವನ್ನು ಘೋಷಣೆ ಮಾಡಿದ್ದವು. ಇದು ದೇಶಾದ್ಯಂತ ಗ್ರಾಹಕರ ಆಕ್ರೋಶಕ್ಕೆ ಕೂಡ ಕಾರಣವಾಗಿತ್ತು. ಅಲ್ಲದೆ ಹೆಚ್ಚಿನವರು ಅವುಗಳನ್ನು ಬಹಿಷ್ಕರಿಸಿ BSNL ಮೊರೆ ಹೋಗಿದ್ದರು. ಆದರೀಗ ಈ ಬೆನ್ನಲ್ಲೇ ಏರ್ಟೆಲ್ ತನ್ನ ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟಿದೆ.

Advertisement

Indira Canteen: ಬಂಟ್ವಾಳದ ಇಂದಿರಾ ಕ್ಯಾಂಟೀನ್‌ನಲ್ಲಿ ಡಿಫೆರೆಂಟ್ ಮೆನು: ಪುಂಡಿ ಗಸಿ, ನೀರು ದೋಸೆ, ಪಾಯಸದೂಟ ಭರ್ಜರಿ ಭೋಜನ!

ಜನರು ತನ್ನನ್ನು ತಿರಸ್ಕರಿಸಲು ಮುಂದಾಗಿದ್ದಾರೆ ಎಂದರಿತ ಭಾರ್ತಿ ಏರ್‌ಟೆಲ್‌ (Airtel) ಟೆಲಿಕಾಂ ಹೆಚ್ಚಿನ ಗ್ರಾಹಕರನ್ನು ಸೆಳೆಯಲು ಕೆಲವು ಅತ್ಯುತ್ತಮ ಪ್ರಿಪೇಯ್ಡ್‌ ರೀಚಾರ್ಜ್‌ ಪ್ಲ್ಯಾನ್‌ಗಳನ್ನು ಪರಿಚಯಿಸಿದೆ. ಸದ್ಯ ಅದರಲ್ಲಿ ಏರ್‌ಟೆಲ್‌ ಟೆಲಿಕಾಂನಲ್ಲಿ 365 ದಿನಗಳ ವ್ಯಾಲಿಡಿಟಿ ಪ್ರಯೋಜನ ಒಳಗೊಂಡಿರೋ ಪ್ಲಾನ್ ಒಂದು ಜನರ, ಗ್ರಾಹಕರ ಗಮನ ಸೆಳೆದಿದೆ.

Advertisement

ಹೌದು, ಭಾರ್ತಿ ಏರ್‌ಟೆಲ್‌ ಟೆಲಿಕಾಂ ಕೇವಲ 1999ರೂ. ಪ್ರೀಪೇಯ್ಡ್‌ ಪ್ಲ್ಯಾನ್‌ ಒಟ್ಟು 365 ದಿನಗಳ ವ್ಯಾಲಿಡಿಟಿ ಪ್ಲಾನ್ ನೀಡಿದೆ. ಇದು ದೀರ್ಘಾವಧಿಗೆ ಅತ್ಯುತ್ತಮ ಯೋಜನೆ ಆಗಿ ಗಮನ ಸೆಳೆದಿವೆ. ಬಿಗ್ ವ್ಯಾಲಿಡಿಟಿಯ ಜೊತೆಗೆ ಈ ಪ್ಲ್ಯಾನ್‌ ಡೇಟಾ ಪ್ರಯೋಜನ, ಎಸ್‌ಎಮ್‌ಎಸ್‌ ಸೌಲಭ್ಯ ಹಾಗೂ ವಾಯಿಸ್‌ ಕರೆ ಪ್ರಯೋಜನಗಳನ್ನುಕೂಡಾ ಪಡೆದುಕೊಂಡಿದೆ. ಜೊತೆಗೆ ಇನ್ನೂ ಹಲವು ಪ್ರಯೋಜನ ಕೂಡ ಇವೆ.

ಏರ್‌ಟೆಲ್‌ ಟೆಲಿಕಾಂ 1999ರೂ. ರೀಚಾರ್ಜ್‌ ಪ್ಲ್ಯಾನ್‌:
ಏರ್‌ಟೆಲ್‌ ಟೆಲಿಕಾಂ 1999ರೂ. ಪ್ರೀಪೇಯ್ಡ್‌ ರೀಚಾರ್ಜ್‌ ಪ್ಲ್ಯಾನ್‌ ವಾರ್ಷಿಕ ಅವಧಿಯ ಪ್ಲ್ಯಾನ್‌ ಆಗಿದ್ದು, 365 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದುಕೊಂಡಿದೆ. ಹಾಗೆಯೇ ಈ ವಾರ್ಷಿಕ ಅವಧಿಯ ರೀಚಾರ್ಜ್‌ ಪ್ಲ್ಯಾನಿನ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 24 GB ಡೇಟಾ ಸೌಲಭ್ಯ ದೊರೆಯುತ್ತದೆ. ಇದರೊಂದಿಗೆ ಪ್ರತಿದಿನ 100 ಎಸ್‌ಎಮ್‌ಎಸ್‌ ಸೌಲಭ್ಯ ಹಾಗೂ ಅನಿಯಮಿತ ವಾಯಿಸ್‌ ಕರೆಗಳ ಪ್ರಯೋಜನ ಸಹ ಪಡೆದುಕೊಂಡಿದೆ. ಹಾಗೆಯೇ ಏರ್‌ಟೆಲ್‌ನ ಈ ಯೋಜನೆಯಲ್ಲಿ ಫ್ರೀ ಹೆಲೋ ಟ್ಯೂನ್ ಹಾಗೂ ವೆಂಕ್‌ ಮ್ಯೂಸಿಕ್‌ ಸೇವೆಗಳು ಸಹ ದೊರೆಯುತ್ತವೆ.

Mangaluru: ವಿದ್ಯುತ್‌ ಸ್ಪರ್ಶಿಸಿ ಒದ್ದಾಡುತ್ತಿದ್ದ ನಾಯಿಯನ್ನು ರಕ್ಷಿಸಲು ಹೋದ ಸಿಎ ವಿದ್ಯಾರ್ಥಿನಿ ಸಾವು

Advertisement
Advertisement
Advertisement