ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

FRUITS ID: ರೈತರಿಗೆ ಕಂದಾಯ ಸಚಿವರು ನೀಡಿದ್ರು ಬಿಗ್ ಅಪ್ಡೇಟ್!! ಜಮೀನಿನ ಮಾಹಿತಿ ದಾಖಲು ಕುರಿತು ಸಚಿವರು ಏನಂದ್ರು?

10:25 AM Nov 18, 2023 IST | ಅಶ್ವಿನಿ ಹೆಬ್ಬಾರ್
UpdateAt: 10:28 AM Nov 18, 2023 IST
Advertisement

FRUITS ID: ರಾಜ್ಯದ ರೈತರೇ ಗಮನಿಸಿ, ನಿಮಗೊಂದು ಮುಖ್ಯ ಮಾಹಿತಿ ಇಲ್ಲಿದೆ ನೋಡಿ!! 15 ದಿನದಲ್ಲಿ ಬರ ಪರಿಹಾರ'( Drouhht Relif Fund)ಪಡೆಯಲು ನಿಮ್ಮ ಪ್ರೂಟ್ ಐಡಿಯಲ್ಲಿ (FRUITS ID) ದಾಖಲಾಗಿರುವ ಜಮೀನಿನ ಮಾಹಿತಿ ನೀಡುವುದು ಕಡ್ಡಾಯ. ಈ ಮಾಹಿತಿ ಆಧಾರದ ಮೇರೆಗೆ ಬರ ಪರಿಹಾರ ಪಾವತಿ ಮಾಡಲಾಗುವ ಕುರಿತು ಕಂದಾಯ ಸಚಿವ ಕೃಷ್ಣಬೈರೇಗೌಡ(Revenue Minister Krishna Byregowda) ಹೇಳಿದ್ದಾರೆ.

Advertisement

ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಎಲ್ಲ ಇಲಾಖೆಗಳಲ್ಲಿ 3 ರೈತರಿಗಾಗಿ ಜಾರಿಯಲ್ಲಿರುವ ಯೋಜನೆಗಳ ಸೌಲಭ್ಯ ಪಡೆಯಲು ರೈತರು ಎಫ್.ಐ.ಡಿ (FID number) ಮಾಡುವುದು ಕಡ್ಡಾಯವಾಗಿದೆ. ಈ ಪ್ರಕ್ರಿಯೆಯನ್ನು ಕೃಷಿ ಇಲಾಖೆಯಿಂದ ಮಾಡಿಸಿಕೊಳ್ಳಬೇಕಾಗಿದ್ದು, ಬರ ಪರಿಹಾರ, ಬೆಳೆ ವಿಮೆ, ವಿವಿಧ ಯೋಜನೆಯಡಿ ಯಂತ್ರೋಪಕರಣಗಳ ಸಹಾಯಧನ ಪಡೆಯಲು ಹೀಗೆ ಅನೇಕ ಯೋಜನೆಯಡಿ ರೈತರು ಸೌಲಭ್ಯ ಸ್ವೀಕರಿಸುವ ನಿಟ್ಟಿನಲ್ಲಿ ಈ ನಂಬರ್‌ ಅವಶ್ಯಕವಾಗಿದೆ.

ರಾಜ್ಯದಲ್ಲಿ ಈ ಬಾರಿ ಭೀಕರ ಬರಗಾಲಕ್ಕೆ (Karnataka Drought) ಎದುರಾಗಿದ್ದು, 236 ತಾಲೂಕುಗಳ ಪೈಕಿ 223 ತಾಲೂಕುಗಳು ಸಂಪೂರ್ಣ ಬರಪೀಡಿತವಾಗಿದೆ. ಇನ್ನು ಕೇವಲ 13 ತಾಲೂಕುಗಳು ಮಾತ್ರವೇ ಬರಪೀಡಿತ ಪಟ್ಟಿಯಲ್ಲಿಲ್ಲ. ಈಗಾಗಲೇ ರಾಜ್ಯ ಸರ್ಕಾರ (Karnataka Government) ಸಹ 324 ಕೋಟಿ ರೂಪಾಯಿಯನ್ನು ಬಿಡುಗಡೆ ಮಾಡಿದ್ದು, ಈಗ ರೈತರು ಬರ ಪರಿಹಾರವನ್ನು ಪಡೆಯುವ ಸಲುವಾಗಿ 15 ದಿನದೊಳಗೆ ರಾಜ್ಯದ ಫ್ರೂಟ್ಸ್‌ (FRUITS Karnataka) ಪೋರ್ಟಲ್‌ನಲ್ಲಿ ಕೆಲವು ಮಾಹಿತಿಯನ್ನುಫ್ರೂಟ್ಸ್ ದತ್ತಾಂಶದಲ್ಲಿ (Fruits Data) ಭರ್ತಿ ಮಾಡಬೇಕು. ಈ ರೀತಿ ಮಾಡುವುದರಿಂದ ಅಕ್ರಮಗಳಿಗೆ ಅವಕಾಶ ಸಿಗದೇ ನೈಜ ಫಲಾನುಭವಿಗಳಿಗೆ ಪರಿಹಾರದ ಹಣ ಬಿಡುಗಡೆಯಾಗುತ್ತದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.ಒಂದು ತಿಂಗಳೊಳಗೆ ಇದನ್ನು ಸರಿಪಡಿಸಿಕೊಳ್ಳಲು ಜಿಲ್ಲಾಧಿಕಾರಿಗಳು ಹಾಗೂ ಸ್ಥಳೀಯ ಆಡಳಿತಕ್ಕೆ ಸೂಚನೆ ನೀಡಿದ್ದಾರೆ.

Advertisement

ಇದನ್ನೂ ಓದಿ: Lucky Draw: ದುಡಿಯಲು ದುಬೈಗೆ ಹಾರಿದ ವ್ಯಕ್ತಿ- ಹೋದ ದಿನವೇ 45 ಕೋಟಿ ಸಂಪಾದಿಸಿ ಬಿಟ್ಟ !! ಅರೆ ಇದ್ಯಾವ ಕೆಲಸ ಮರ್ರೆ ?!

Related News

Advertisement
Advertisement