For the best experience, open
https://m.hosakannada.com
on your mobile browser.
Advertisement

Rishabh Pant: ರಿಷಬ್ ಪಂತ್‌ ಗೆ ಭಾರೀ ದಂಡ ವಿಧಿಸಬೇಕು : ದಿಗ್ಗಜ ಕ್ರಿಕೆಟಿಗನ ಆಗ್ರಹ

Rishabh Pant: ದಿಗ್ಗಜ ಆ್ಯಡಮ್ ಗಿಲ್‌ ಕ್ರಿಸ್ಟ್ ಅಸಮಾಧಾನ ವ್ಯಕ್ತಪಡಿಸಿದ್ದು, ಪಂತ್‌ಗೆ ದಂಡ ವಿಧಿಸುವಂತೆ ಬಿಸಿಸಿಐಗೆ ಕೇಳಿಕೊಂಡಿದ್ದಾರೆ.
10:54 PM Apr 13, 2024 IST | ಸುದರ್ಶನ್
UpdateAt: 11:10 PM Apr 13, 2024 IST
rishabh pant  ರಿಷಬ್ ಪಂತ್‌ ಗೆ ಭಾರೀ ದಂಡ ವಿಧಿಸಬೇಕು   ದಿಗ್ಗಜ ಕ್ರಿಕೆಟಿಗನ ಆಗ್ರಹ
Advertisement

Rishabh pant: ಶುಕ್ರವಾರ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಆಟದ ಸಂದರ್ಭದಲ್ಲಿ ಥರ್ಡ್ ಅಂಪೈರ್ ಅಲ್ಟ್ರಾ-ಎಡ್ಜ್ ತಂತ್ರಜ್ಞಾನವನ್ನು ಏಕೆ ಬಳಸಲಿಲ್ಲ ಎಂಬ ಬಗ್ಗೆ ಅಸಮಾಧಾನಗೊಂಡ ರಿಷಬ್ ಪಂತ್ ಆನ್-ಫೀಲ್ಡ್ ಅಂಪೈರ್‌ನೊಂದಿಗೆ ಸುದೀರ್ಘ ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ಇದೀಗ ಈ ಕುರಿತು ಕ್ರಿಕೆಟ್ ದಿಗ್ಗಜ ಆ್ಯಡಮ್ ಗಿಲ್‌ ಕ್ರಿಸ್ಟ್ ಅಸಮಾಧಾನ ವ್ಯಕ್ತಪಡಿಸಿದ್ದು, ಪಂತ್‌ಗೆ ದಂಡ ವಿಧಿಸುವಂತೆ ಬಿಸಿಸಿಐಗೆ ಕೇಳಿಕೊಂಡಿದ್ದಾರೆ.

Advertisement

ಇದನ್ನೂ ಓದಿ: Bournvita ಇನ್ನು ಮುಂದೆ ಕುಡಿಯುವ ಹಾಗಿಲ್ಲ? ಸರ್ಕಾರದಿಂದ ಹೊರ ಬಂದಿದೆ ಬಿಗ್ ಅಪ್ಡೇಟ್!

ಐಪಿಎಲ್ 2024ರ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಎರಡನೇ ಗೆಲುವು ಸಾಧಿಸಿದೆ. ಲಕ್ನೋದ ಏಕನಾ  ಕ್ರಿಕೆಟ್ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಲಕ್ನೋ ಸೂಪರ್‌ ಜೈಂಟ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ 6 ವಿಕೆಟ್‌ಗಳ ಜಯ ಸಾಧಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ತಂಡ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 167 ರನ್ ಗಳಿಸಿತು. ಈ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ 18. ಓವರ್‌ಗಳಲ್ಲಿ 1 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು. ಆದರೆ, ಈ ಪಂದ್ಯದಲ್ಲಿ ವಿಜೇತ ತಂಡದ ನಾಯಕ ರಿಷಬ್ ಪಂತ್‌ ವರ್ತನೆಗೆ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಆ್ಯಡಮ್ ಗಿಲ್‌ ಕ್ರಿಸ್ಟ್ ಅಸಮಾಧಾನ ವ್ಯಕ್ತಪಡಿಸಿದ್ದು ,ಪಂತ್‌ಗೆ ದಂಡ ವಿಧಿಸುವಂತೆ ಬಿಸಿಸಿಐಗೆ ಕೇಳಿಕೊಂಡಿದ್ದಾರೆ.

Advertisement

ಇದನ್ನೂ ಓದಿ: Soujanya Case: ಸೌಜನ್ಯಾಳಿಗೆ ನ್ಯಾಯ ದೊರೆಯಬೇಕೆಂದಾದರೆ ಈ ಬಾರಿ NOTA ಕ್ಕೆ ಮತ ಚಲಾಯಿಸಿ : ಮಹೇಶ್ ಶೆಟ್ಟಿ ತಿಮರೋಡಿ

ಲಖನೌ ಪಂದ್ಯದಲ್ಲಿ ಬ್ಯಾಟಿಂಗ್‌ ಮಾಡುತ್ತಿದ್ದಾಗ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಬ್ ಪಂತ್ ಥರ್ಡ್ ಅಂಪೈರ್ ನಿರ್ಣಯ ಸಂಬಂಧ ಮೈದಾನದಲ್ಲಿ ಫೀಲ್ಡ್ ಅಂಪೈರ್ ಜೊತೆ ವಾಗ್ವಾದ ನಡೆಸಿದ್ದಾರೆ. ಇದಕ್ಕೆ ಕ್ಯಾತ ಕ್ರಿಕೆಟಿಗ ಗಿಲ್‌ಕ್ರಿಸ್ಟ್‌ ಪ್ರತಿಕ್ರಿಯಿಸಿದ್ದು, ಆಟದ ಸಂದರ್ಭದಲ್ಲಿ ಅಂಪೈರ್‌ಗಳು ಅರ್ಥಹೀನ ಚರ್ಚೆಗೆ ಅವಕಾಶ ನೀಡದೆ ಆಟದ ಮೇಲೆ ಹೆಚ್ಚಿನ ಹಿಡಿತ ಸಾಧಿಸಬೇಕು ಎಂದು ತಿಳಿಸಿದ್ದಾರೆ.

ದಂಡ ವಿಧಿಸಬೇಕು :

ಲಕ್ನೋ (ಎಲ್‌ಎಸ್‌ಜಿ) ಇನ್ನಿಂಗ್ಸ್‌ನ ನಂತರ ಕ್ರಿಕ್‌ಬಜ್‌ನೊಂದಿಗೆ ಮಾತನಾಡಿದ ಗಿಲ್‌ಕ್ರಿಸ್ಟ್‌ ಪಂತ್ ಅವರ ಪ್ರದರ್ಶನದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಅಂಪೈರ್ ಮತ್ತು ಪಂತ್ ನಡುವಿನ ವಾಗ್ವದ ಕಡಿಮೆ ಇರಬೇಕು ಎಂದರು. ಮೈದಾನದ ಅಂಪೈರ್‌ನ ನಿರ್ಧಾರದ ನಂತರ, ನಾಯಕನು ನಿರ್ಣಯವನ್ನು ಪಾಲಿಸಿ, ಆಟ ಮುಂದುವರೆಸಬೇಕು. ಅಂಪೈರ್‌ಗಳು ಹೆಚ್ಚು ಸಮಯದವರೆಗೆ ಚರ್ಚಿಸಲು ಮತ್ತು ಅವರ ನಿರ್ಣಯವನ್ನು ಪರಿವರ್ತಿಸಲು ಮುಂದುವರೆಸಿದರೆ ದಂಡ ವಿಧಿಸಲು ಅಂಪೈರ್‌ಗಳಿಗೆ ಅಧಿಕಾರವಿದೆ ಎಂದು ಗಿಲ್‌ಕ್ರಿಸ್ಟ್ ಹೇಳಿದ್ದಾರೆ.

Advertisement
Advertisement
Advertisement