Actor Vishwajeet: ಏಕಾಏಕಿ ಆಕೆಗೆ ತುಟಿ ಕಚ್ಚಿ ಚುಂಬಿಸಿಬಿಟ್ಟ ವಿಶ್ವಜಿತ್! ಆಕೆ ಯಾರು ಗೊತ್ತಾ?
Actor Vishwajeet: ವಿಶ್ವಜಿತ್ ಅವರು ಏಕಾಏಕಿ ಆಕೆಗೆ ತುಟಿ ಕಚ್ಚಿ ಚುಂಬಿಸಿಬಿಟ್ಟಿದ್ದು ಇದೀಗ ಎಲ್ಲೆಡೆ ಸುದ್ದಿ ಆಗಿದೆ. ಹೌದು, ಸ್ಟುಡಿಯೋ ಒಂದರಲ್ಲಿ ಶೂಟಿಂಗ್ ನಡೆಯುತ್ತಿತ್ತು. ಆಗ ವಿಶ್ವಜಿತ್ ಏಕಾಏಕಿ ರೇಖಾ ಬಳಿ ಬಂದು ತುಟಿ ಕಚ್ಚಿ ಚುಂಬಿಸಿಬಿಟ್ಟರಂತೆ.
ಇದನ್ನೂ ಓದಿ: Namrata Gouda: ನನಗೆ ಪದೇ ಪದೇ ಅದನ್ನು ಮುಟ್ಟಿಕೊಳ್ಳೋ ಅಭ್ಯಾಸವಿದೆ - ನಟಿ ನಮ್ರತಾ ಗೌಡ !!
ಕನ್ನಡ ಚಿತ್ರರಂಗದಲ್ಲಿ ಡಾ ರಾಜ್ಕುಮಾರ್ ನಟನೆಯ 'ಗೋವಾದಲ್ಲಿ ಸಿಐಡಿ 999' ಸಿನಿಮಾ ಮೂಲಕ ನಾಯಕಿಯಾಗಿ ನಟನೆ ಪ್ರಾರಂಭಿಸಿದ್ದರು ರೇಖಾ. ಅದಕ್ಕೂ ಮೊದಲು ರೇಖಾ ಬಾಲನಟಿಯಾಗಿ ಹಲವು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು. 'ಗೋವಾದಲ್ಲಿ ಸಿಐಡಿ 999' ಸಿನಿಮಾ ಬಳಿಕ ಬಾಲಿವುಡ್ ಚಿತ್ರರಂಗದ ಕಡೆ ಮುಖ ಮಾಡಿದ ಭಾನುರೇಖಾ, ಅಲ್ಲಿ ರೇಖಾ ಹೆಸರಿನಿಂದ ಗುರುತಿಸಿಕೊಂಡರು. 1968ರಲ್ಲಿ ಹಿಂದಿಯಲ್ಲಿ 'ಸಾವನ್ ಬಾಧೋ' ಚಿತ್ರದ ಮೂಲಕ ನಟಿ ರೇಖಾ ಮಿಂಚಿದರು. ಆದರೆ ಆ ಚಿತ್ರದಲ್ಲಿ ನಟಿಸುವ ಮೊದಲು ನಟಿ ರೇಖಾ, 'ಅಂಜಾನಾ ಸಫರ್' (Anjana Safar,) ಎಂಬ ಇನ್ನೊಂದು ಚಿತ್ರದಲ್ಲಿ ನಟಿಸಿದ್ದರು.
ಇದನ್ನೂ ಓದಿ: Google Users ಗೆ ಬಿಗ್ ಗುಡ್ ನ್ಯೂಸ್! ಈ ಅಪ್ಡೇಟ್ ಇಂದ ಇನ್ಮುಂದೆ ಎಲ್ಲರೂ ಸೇಫ್
ಆ ಚಿತ್ರದ ಶೂಟಿಂಗ್ ವೇಳೆ ನಟಿ ರೇಖಾಗೆ ಜೀವನದಲ್ಲಿ ಮರೆಯಲಾಗದ ಘಟನೆಯೊಂದು ನಡೆದಿತ್ತು. ಸ್ಟುಡಿಯೋ ಒಂದರಲ್ಲಿ ಶೂಟಿಂಗ್ ನಡೆಯುತ್ತಿತ್ತು. ಡೈರೆಕ್ಟರ್ 'ಆಕ್ಷನ್' ಕೂಡ ಹೇಳದೇ ಇರುವ ಸಮಯದಲ್ಲಿ ನಾಯಕ ವಿಶ್ವಜಿತ್ (Actor Vishwajeet) ಏಕಾಏಕಿ ರೇಖಾ ಬಳಿ ಬಂದು ತುಟಿ ಕಚ್ಚಿ ಚುಂಬಿಸಿಬಿಟ್ಟರು. ಸಡನ್ನಾಗಿ ನಡೆದ ಈ ಘಟನೆಯಿಂದ ರೇಖಾ ವಿಚಲಿತರಾಗಿ ಕೋಪಗೊಂಡರು. 'ಇದೇನಿದು, ನನಗೆ ಒಂದು ಮಾತು ತಿಳಿಸದೇ, ನಿರ್ದೇಶಕರು ಆಕ್ಷನ್ ಕೂಡ ಹೇಳದೇ ಹೀಗೆ ಚುಂಬಿಸಿದ್ದು ಯಾಕೆ' ಎಂದು ನಟಿ ರೇಖಾ ಧೈರ್ಯವಾಗಿಯೇ ಪ್ರಶ್ನಿಸಿದರು. ಅದಕ್ಕೆ 'ಇಲ್ಲ, ಆ ದೃಶ್ಯ ಹಾಗೇ ಬರಬೇಕಿತ್ತು. ಇದ್ದಕ್ಕಿದ್ದಂತೆ ಒಬ್ಬ ಪುರುಷ ಒಂದು ಮಹಿಳೆಯನ್ನು ಚುಂಬಿಸಿದರೆ ಆ ಮಹಿಳೆ ಹೇಗೆ ರಿಯಾಕ್ಟ್ ಮಾಡುತ್ತಾಳೆ ಎಂಬದೇ ಈ ಸೀನ್' ಎಂದು ಚಿತ್ರದ ಡೈರೆಕ್ಷರ್ ಸಮಜಾಯಿಸಿ ಕೊಟ್ಟರು.
ಆದರೆ, ಅದಕ್ಕೆ ನಟಿ ರೇಖಾ ವಿರೋಧ ವ್ಯಕ್ತಪಡಿಸಿದರು. ಅಷ್ಟೇ ಅಲ್ಲ, 'ನಾನೊಬ್ಬಳು ನಟಿ, ದೃಶ್ಯಕ್ಕೆ ಹೇಗೆ ಬೇಕೋ ಹಾಗೆ ನಟಿಸುವುದು ನನಗೆ ಗೊತ್ತು. ನೈಜವಾಗಿ ಬರಬೇಕೆಂದು ಹೀಗೆ ಮಾಡುವುದಾದರೆ ನಾವಿಬ್ಬರೂ ಎಲ್ಲರೂ ನಟರೆಂಬುವುದನ್ನು ಮರೆತೂ ಎಲ್ಲ ಸೀನ್ಗಳನ್ನೂ ಹೀಗೆಯೇ ಮಾಡಿಸಿ' ಎಂದು ಕೋಪದಿಂದ ನಟಿ ರೇಖಾ ಹೇಳಿದ್ದರು. ಇದರಿಂದ ಚಿತ್ರದ ಟೀಮ್ ಮಧ್ಯೆ ಸಾಕಷ್ಟು ಮನಸ್ತಾಪವಾಯಿತು.
ಈ ಘಟನೆಯಿಂದ ನಟಿ ರೇಖಾ ಅಕ್ಷರಶಃ ಬೆಚ್ಚಿಬಿದ್ದಿದ್ದರು. ಬಾಲಿವುಡ್ ಚಿತ್ರರಂಗದ ಬಿಹೇವಿಯರ್ ಬಗ್ಗೆ ಗೊತ್ತಿಲ್ಲದ ರೇಖಾ ಬಳಿಕ ಸ್ವಲ್ಪ ಕಾಲ ಹೆದರಿಕೊಂಡೇ ಶೂಟಿಂಗ್ಗೆ ಹೋಗುತ್ತಿದ್ದರಂತೆ. ಯಾವಾಗ ಯಾರು ಬಂದು ರೇಪ್ ಮಾಡಿ ಇದೂ ಸೀನ್ ಅಂದುಬಿಡುತ್ತಾರೋ, ಯಾರಿಂದ ಎಷ್ಟು ಬಾರಿ ತುಟಿ ಕಚ್ಚಿಸಿಕೊಳ್ಳಬೇಕೋ ಎಂಬ ಆತಂಕ ಸಾಕಷ್ಟು ಕಾಲ ಕಾಡುತ್ತಲೇ ಇತ್ತಂತೆ. ಆದರೆ, ತುಂಬಾ ಕಾಲ ಹಾಗೆ ನಡೆಯಲಿಲ್ಲ. ಕಾರಣ, ಸ್ವಲ್ಪ ಕಾಲದಲ್ಲೇ ನಟಿ ರೇಖಾ ಸ್ಟಾರ್ ನಟಿಯಾಗಿ ಬಾಲಿವುಡ್ ನಲ್ಲಿ ಮಿಂಚಿದ್ದರು.