For the best experience, open
https://m.hosakannada.com
on your mobile browser.
Advertisement

Kiccha Suddep: ಸ್ನೇಹ ಬೇರೆ ನ್ಯಾಯ ಬೇರೆ, ರೇಣುಕಾಸ್ವಾಮಿಗೆ ನ್ಯಾಯ ಸಿಗಬೇಕು - ಸುದೀಪ್ ಫಸ್ಟ್ ರಿಯಾಕ್ಷನ್ !!

11:31 PM Jun 16, 2024 IST | ಸುದರ್ಶನ್
UpdateAt: 11:31 PM Jun 16, 2024 IST
kiccha suddep  ಸ್ನೇಹ ಬೇರೆ ನ್ಯಾಯ ಬೇರೆ  ರೇಣುಕಾಸ್ವಾಮಿಗೆ ನ್ಯಾಯ ಸಿಗಬೇಕು   ಸುದೀಪ್ ಫಸ್ಟ್ ರಿಯಾಕ್ಷನ್

Kiccha Sudeep: ರೇಣುಕಾ ಸ್ವಾಮಿ ಹತ್ಯೆ ಪ್ರಕರಣ(Renukaswamy Murder Case) ಮುಗಿಯದ ಅಧ್ಯಾಯವಾಗಿದೆ. ಬಗೆದಷ್ಟು ಆಳಕ್ಕೆ ಹೋಗುತ್ತಿದ್ದು ಪ್ರತೀ ದಿನವೂ ಒಂದೊಂದು ಸ್ಪೋಟಕ ಸತ್ಯ ಹೊರಬೀಳುತ್ತಿವೆ. ಆರೋಪಿ ದರ್ಶನ್(Actor Darsha) ಹಾಗೂ ಗ್ಯಾಂಗ್ ಪೋಲೀಸ್ ಕಷ್ಟಡಿಯಲ್ಲೇ ದಿನಕಳೆಯುವಂತಾಗಿದೆ. ಇದರ ನಡುವೆ ಈ ಕೇಸಿಗೆ ಸಂಬಂಧಿಸಿದಂತೆ ನಟ ಸುದೀಪ್(Kiccha Sudeep) ಅವರು ಫಸ್ಟ್ ರಿಯಾಕ್ಷನ್ ನೀಡಿದ್ದಾರೆ.

Advertisement

ಹೌದು, ರಾಜ್ಯದಲ್ಲಿ ಕೆಲವು ದಿನಗಳಿಂದ ಸಂಚಲನ ಸೃಷ್ಟಿಸುತ್ತಿರುವ ಪ್ರಕರಣದ ಬಗ್ಗೆ ಇದೀಗ ಕಿಚ್ಚ ಸುದೀಪ್ ಅವರು ಮೊದಲ ಬಾರಿಗೆ ರಿಯಾಕ್ಟ್ ಮಾಡಿದ್ದು, ಕೆಲವು ಅಚ್ಚರಿ ಹೇಳಿಕೆಗಳನ್ನು ನೀಡಿದ್ದಾರೆ. ಆರಂಭದಿಂದಲೂ ಚಡ್ಡಿದೋಸ್ತ್ ಗಳಾಗಿ ಬಾಳಿದವರು ಕೆಲವು ವರ್ಷಗಳಿಂದ ಮುನಿಸಿಕೊಂಡಿದ್ದರು. ಆದರೆ ಈ ನಡುವೆ ಮತ್ತೆ ಒಂದಾಗುವ ಸಂದರ್ಭ ಬಂದಿದ್ದರೂ ಏನೇನೋ ಆಗಿ ಇದೀಗ ಈ ಹಂತಕ್ಕೆ ಬಂದು ತಲುಪಿದೆ. ಹೀಗಾಗಿ ಇದೆಲ್ಲದನ್ನೂ ಗಮನದಲ್ಲಿರಿಸಿಕೊಂಡ ಸುದೀಪ್ ಭಾರೀ ಜಾಣ ನಡೆಯನ್ನೇ ಅನುಸರಿಸಿ ಹೇಳಿಕೆ ನೀಡಿದ್ದಾರೆ.

ಸುದೀಪ್ ಹೇಳಿದ್ದೇನು?
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸುದೀಪ್ ಅವರು 'ಬಾಳಿ ಬದುಕಬೇಕಿದ್ದ ರೇಣುಕಾಸ್ವಾಮಿ ಬೀದಿ ಹೆಣವಾಗಿದ್ದಕ್ಕೆ, ಆತನ ಹೆಂಡತಿಗೆ, ಮುಂದೆ ಹುಟ್ಟಿ ಬರುವ ಮಗುವಿಗೆ ಹಾಗೂ ಅವರ ಕುಟುಂಬಕ್ಕೆ ನ್ಯಾಯ ಸಿಗಬೇಕೆಂಬುದು ನಮ್ಮ ಅಭಿಪ್ರಾಯವಾಗಿದೆ. ಈಗಾಗಲೇ ಮಾಧ್ಯಗಳು ಹಾಗೂ ಪೊಲೀಸರು ಸರಿಯಾಗಿ ಕೆಲಸ ಮಾಡುತ್ತಿದ್ದಾರೆ. ನಾನು ಯಾರ ಪರವಾಗಿಯೂ, ವಿರೋಧವಾಗಿಯೂ ನನ್ನ ಅಭಿಪ್ರಾಯ ವ್ಯಕ್ತಪಡಿಸಲ್ಲ. ಮುಖ್ಯಮಂತ್ರಿಗಳೇ ಹಠವಿಡಿದು ಕುಳಿತು ಈ ಕೇಸಿನಲ್ಲಿ ನ್ಯಾಯ ಕೊಡಿಸಲು ಮುಂದಾಗಿದ್ದಾರೆ. ಅದಕ್ಕೆ ನಾವೆಲ್ಲರೂ ಬೆಂಬಲಿಸಬೇಕಿದೆ ಎಂದು ನಟ ಹಾಗೂ ನಿರ್ದೇಶಕ ಕಿಚ್ಚ ಸುದೀಪ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Advertisement

ಅಲ್ಲದೆ ಇಂದು ಒಂದಿಲ್ಲೊಂದು ವಿಚಾರಗಳಿಗೆ ಚಿತ್ರರಂಗದ ಹೆಸರು ಬರುತ್ತಿದೆ. ಜನ ಬರ್ತಿಲ್ಲ ಅಂದ್ರೆ ಚಿತ್ರರಂಗ, ಸಿನಿಮಾ ಚೆನ್ನಾಗಿಲ್ಲ ಅಂದ್ರೆ ಚಿತ್ರರಂಗ, ಈಗ ಏನೋ ನಡೀತಿದೆ, ಅದಕ್ಕೂ ಚಿತ್ರರಂಗ ಅಂತಾರೆ. ಹಾಗಾಗಿ ಚಿತ್ರರಂಗಕ್ಕೆ ಕ್ಲಿನ್ ಚಿಟ್ ಸಿಗ್ಬೇಕು. ತಪ್ಪತಸ್ಥರಿಗೆ ಶಿಕ್ಷೆ ಆಗ್ಬೇಕು ಎಂದಿದ್ದಾರೆ.

ಜೊತೆಗೆ ನಾನು ಮನೆಯಲ್ಲಿ ಸಣ್ಣಪುಟ್ಟ ತಪ್ಪುಗಳನ್ನು ಮಾಡಿ ಬೈಸಿಕೊಳ್ತೀನಿ. ಸೆಲೆಬ್ರಿಟಿ ಅಂದ ಮಾತ್ರಕ್ಕೆ ನಾವ್ಯಾರೂ ದೇವರಲ್ಲ. ಅಭಿಮಾನಿಗಳು ಆ ರೀತಿ ಭಾವಿಸಬೇಡಿ. ನಾವು ಮಾಡೋದೆಲ್ಲ ಸರಿನೇ ಮಾಡಬೇಕು ಅನ್ನೋ ಒತ್ತಡವನ್ನೂ ಹಾಕಬೇಡಿ. ಏಕೆಂದರೆ ತಪ್ಪು ಮಾಡೋನೆ ಮನುಷ್ಯ, ಫ್ಲಾಪ್‌ಗಳನ್ನ ಕೊಡೋನೇ ಹೀರೋ ಅಂತ ಹೇಳಿದ್ದಾರೆ.

Advertisement
Advertisement
Advertisement