For the best experience, open
https://m.hosakannada.com
on your mobile browser.
Advertisement

Actor Ramkrishna: ಮನೆ ಕೆಲಸದವಳನ್ನೇ ಪ್ರೀತಿಸಿ ಮದುವೆಯಾದ ಹಿರಿಯ ನಟ ಇವರೇ ನೋಡಿ! ಇವರ ಇಂಟರೆಸ್ಟಿಂಗ್ ಸ್ಟೋರಿ ಇಲ್ಲಿದೆ

Actor Ramkrishna: ವೈಯಕ್ತಿಕ ವಿಚಾರಕ್ಕೆ ಬರುವುದಾದರೇ ತುಂಬಾ ಸರಳ ವ್ಯಕ್ತಿಯಾಗಿರುವ ಇವರು ಪುಟ್ಟಣ್ಣ ಅವರ ಮನೆ ಕೆಲಸದ ಆಳು ಮಂಗಳ ಎಂಬುವರನ್ನು ಮದುವೆಯಾದರು
12:13 PM Jul 19, 2024 IST | ಕಾವ್ಯ ವಾಣಿ
UpdateAt: 12:13 PM Jul 19, 2024 IST
actor ramkrishna  ಮನೆ ಕೆಲಸದವಳನ್ನೇ ಪ್ರೀತಿಸಿ ಮದುವೆಯಾದ ಹಿರಿಯ ನಟ ಇವರೇ ನೋಡಿ  ಇವರ ಇಂಟರೆಸ್ಟಿಂಗ್ ಸ್ಟೋರಿ ಇಲ್ಲಿದೆ
Advertisement

Actor Ramkrishna: ಕನ್ನಡ ಚಿತ್ರರಂಗದ ಖ್ಯಾತ ನಟ ರಾಮಕೃಷ್ಣ ಅಂದರೆ ಬಹುಷಃ ಎಲ್ಲರಿಗೂ ಗೊತ್ತಿರಬಹುದು. ಇವರನ್ನು ನೀರ್​ನಳ್ಳಿ ರಾಮಕೃಷ್ಣ ಎಂದೂ ಸಹ ಕರೆಯುತ್ತಾರೆ.  ನಟ ರಾಮಕೃಷ್ಣ ಸುಮಾರು 200ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಬಬ್ರುವಾಹನ, ರಂಗನಾಯಕಿ, ಮಾನಸ ಸರೋವರ, ಪಡುವಾರಳ್ಳಿ ಪಾಂಡವರು, ಬೆಂಕಿಯಲ್ಲಿ ಅರಳಿದ ಹೂವು, ಹೀಗೆ ಅವರ ನಟನೆಯ ಸಿನಿಮಾಗಳ ಪಟ್ಟಿ ನೋಡುತ್ತ ಹೋದರೆ ಅದೊಂದು ಸೊಬಗು.

Advertisement

ಒಂದು ಕಾಲದಲ್ಲಿ ಬಹುಬೇಡಿಕೆ ನಟರಾಗಿದ್ದ ರಾಮಕೃಷ್ಣ (Actor Ramkrishna) ಇವರು ಶಿರಸಿಯಲ್ಲಿ ಬ್ರಾಹ್ಮಣ ಕುಟುಂಬದಲ್ಲಿ 1951 ರಲ್ಲಿ ಜನಿಸಿದರು. ಸದ್ಯ ಇವರು ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಹೆಗ್ಗಳಿಕೆ ಪಡೆದಿದ್ದಾರೆ ಅಂದ್ರೆ ಸುಳ್ಳಾಗದು. ಕನ್ನಡ ಮಾತ್ರವಲ್ಲ ತಮಿಳು ತೆಲುಗು ಚಿತ್ರರಂಗದಲ್ಲೂ ಬೆರಳೆಣಿಕೆ ಸಿನಿಮಾಗಳಲ್ಲಿ ನಟಿಸಿದ ಇವರು 1990ರ ದಶಕದಿಂದ ಹೆಚ್ಚು ಪೋಷಕ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಒಂದು ಕಾಲದಲ್ಲಿ ಬಹುಬೇಡಿಕೆಯ ಹಾಗೂ ನಾಯಕ ನಟನಾಗಿ ಮಿಂಚಿದ್ದ ರಾಮಕೃಷ್ಣ ಅವರು ಕಿಚ್ಚ ಸುದೀಪ್‌ ಅವರ ಬಚ್ಚನ್ ಹಾಗೂ ಶರಣ್‌ ಅವರ ರಾಜ ರಾಜೇಂದ್ರ ಸಿನಿಮಾಗಳಲ್ಲಿ ಚಿಕ್ಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಕೆಲ ಕಾಲ ನಂತರದಲ್ಲಿ ಇವರಿಗೆ ಸಿನಿಮಾದಲ್ಲಿ ಅವಕಾಶಗಳು ಕಮ್ಮಿ ಆದವು. ಇವರು ಸಿನಿಮಾ ಜೊತೆಗೆ ಧಾರವಾಹಿ ಗಳಲ್ಲೂ ನಟಿಸಿ ಸೈ ಅನಿಸಿಕೊಂಡಿದ್ದಾರೆ.

ಇನ್ನು ಇವರ ವೈಯಕ್ತಿಕ ವಿಚಾರಕ್ಕೆ ಬರುವುದಾದರೇ ತುಂಬಾ ಸರಳ ವ್ಯಕ್ತಿಯಾಗಿರುವ ಇವರು ಪುಟ್ಟಣ್ಣ ಅವರ ಮನೆ ಕೆಲಸದ ಆಳು ಮಂಗಳ ಎಂಬುವರನ್ನು ಮದುವೆಯಾದರು. ಹೌದು, ಸರಳ, ಸೀದಾ ಸಾದಾ ಮನುಷ್ಯ ಆಗಿರುವ ಇವರು ತನ್ನ ಮನೆಯ ಕೆಲಸದವಳನ್ನು ಇಷ್ಟ ಪಟ್ಟು ಆಕೆಗೆ ಬಾಳು ಕೊಟ್ಟಿದ್ದಾರೆ. ಯಾವುದೇ ಅಹಂ ಇಲ್ಲದೇ ಮದುವೆಯಾಗಿ ಉತ್ತಮವಾದ ಜೀವನ ನಡೆಸುತ್ತಿರುವ ಈ ದಂಪತಿಗೆ ಇಬ್ಬರು ಮಕ್ಕಳು ಕೂಡಾ ಇದ್ದಾರೆ. ಮಕ್ಕಳು ಚೆನ್ನಾಗಿ ಓದಿ ಒಳ್ಳೆಯ ವ್ಯವಹಾರ ನಡೆಸಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಅದರಲ್ಲೂ ವಿಶೇಷವೆಂದರೇ ಇವರ ಮಗ ಅಕ್ಷತ್ ವಿದೇಶಿ ಹೆಣ್ಣು ಮಗಳನ್ನು ಮದುವೆಯಾಗಿ ಖುಷಿಯಾಗಿದ್ದಾರೆ.

Advertisement

Jio Recharge Plan: ಜಿಯೋ ಗ್ರಾಹಕರಿಗೆ ಎರಡೆರಡು ಗುಡ್ ನ್ಯೂಸ್ ಇಲ್ಲಿದೆ: ಹೊಸ ರಿಚಾರ್ಜ್ ಪ್ಲಾನ್ ಜೊತೆಗೆ 5G ಸೇವೆ ಲಭ್ಯ!

Advertisement
Advertisement
Advertisement