ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Actor Darshan Case: ನಟ ದರ್ಶನ್‌ ವಿರುದ್ಧ ರೌಡಿ ಶೀಟರ್‌ ತೆರೆಯುವ ಸಾಧ್ಯತೆ?

Actor Darshan Case: ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್‌ ವಿರುದ್ಧ ರೌಡಿಶೀಟ್‌ ತೆರೆಯಬೇಕೆನ್ನುವ ಚರ್ಚೆ ನಡೆಯುತ್ತಿದೆ.
12:25 PM Jun 13, 2024 IST | ಸುದರ್ಶನ್
UpdateAt: 12:25 PM Jun 13, 2024 IST
Advertisement

Actor Darshan Case: ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್‌ ಸೇರಿ 13 ಜನರನ್ನು 6 ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ನೀಡಲಾಗಿದೆ. ಬೆಂಗಳೂರಿನ ಅನ್ನಪೂರ್ಣೇಶ್ವರಿನಗರ ಪೊಲೀಸ್‌ ಠಾಣೆಯಲ್ಲಿ ದರ್ಶನ್‌ ಗ್ಯಾಂಗ್‌ ಇದೆ. ಇದೀಗ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್‌ ವಿರುದ್ಧ ರೌಡಿಶೀಟ್‌ ತೆರೆಯಬೇಕೆನ್ನುವ ಚರ್ಚೆ ನಡೆಯುತ್ತಿದೆ.

Advertisement

Pavithra Gowda: ಪವಿತ್ರಾ ಗೌಡ ಮಾಜಿ ಪತಿ ಸಂಜಯ್‌ ಸಿಂಗ್‌ ರಿಂದ ಶಾಕಿಂಗ್‌ ಹೇಳಿಕೆ? ಕೊಲೆ ಕೃತ್ಯದ ಕುರಿತು ಏನಂದ್ರು?

ದರ್ಶನ್‌ ಅವರ ಸಾಮಾಜಿಕ ವ್ಯಕ್ತಿತ್ವ ಇನ್ನಿತರೆಗಳನ್ನು ಪರಿಗಣಿಸಿ ರೌಡಿಶೀಟ್‌ ತೆರೆಯುವ ಒತ್ತಾಯ ಕೇಳಿ ಬರುತ್ತಿದ್ದು, ಈ ಕುರಿತು ಹಿರಿಯ ಪೊಲೀಸರೊಟ್ಟಿಗೆ ಚರ್ಚಿಸಿ ನಿರ್ಣಯ ಮಾಡುವುದಾಗಿ ಸ್ವತಃ ಗೃಹ ಸಚಿವ ಪರಮೇಶ್ವರ್‌ ಹೇಳಿದ್ದಾರೆ.

Advertisement

ರೌಡಿಶೀಟ್‌ ತೆರೆಯುವುದು ಹೇಗೆ?

ಕುಟುಂಬದ ಕಲಹದಲ್ಲಿ ನಡೆದ ಕೊಲೆಗಳನ್ನು ಹೊರತು ಪಡಿಸಿದರೆ ದ್ವೇಷದ ಕೊಲೆ ಕೇಸ್‌ಗಳಲ್ಲಿ ರೌಡಿ ಶೀಟ್‌ ತೆಗೆಯಲಾಗುತ್ತದೆ. ಇಲ್ಲಿ ರೇಣುಕಾಸ್ವಾಮಿ ಹತ್ಯೆ ಪ್ರಕರಣ ಕುಟುಂಬ ಕಲಹ ಇಲ್ಲ. ಹಾಗಾಗಿ ರೌಡಿಶೀಟ್‌ ತೆರೆಯುವ ಸಾಧ್ಯತೆ ಇದೆ ಎನ್ನಲಾಗಿದೆ. ಪೊಲೀಸ್‌ನವರು ಈ ಕೇಸ್‌ನಲ್ಲಿ ಒಂದು ವೇಳೆ ರೌಡಿ ಶೀಟರ್‌ ಪಟ್ಟಿ ತೆರೆದರೆ ನಟ ದರ್ಶನ್‌ ಹಾಗೂ ಗ್ಯಾಂಗ್‌ ವಿರುದ್ಧ ಕಾಮಾಕ್ಷಿ ಪಾಳ್ಯ ಪೊಲೀಸ್‌ ಠಾಣೆಯಲ್ಲಿ ರೌಡಿ ಶೀಟರ್‌ ಆಗ್ತಾರೆ.

ಹಾಗೆನೇ ಈ ಹಿಂದೆ ದಾಖಲಾಗಿದ್ದ ಕೇಸ್‌ಗಳ ಬಗ್ಗೆ ಪೊಲೀಸರು ಮಾಹಿತಿ ಸಂಗ್ರಹ ಮಾಡ್ತಾ ಇದ್ದು, ಪ್ರತಿಯೊಬ್ಬ ಆರೋಪಿಗಳ ಪ್ರೊಫೈಲ್‌ ರೆಡಿ ಮಾಡ್ತಿದ್ದಾರೆ ಎನ್ನಲಾಗಿದೆ.

ಸರಣಿ ಅಪರಾಧ ಪ್ರಕ್ರಿಯೆಗಳಲ್ಲಿ ಭಾಗಿಯಾಗಿದ್ದರೆ, ಅಥವಾ ಆರೋಪಿತನಾಗಿದ್ದರೆ, ಕೃತ್ಯಗಳಿಗೆ ದಾಖಲೆಗಳಿದ್ದರೆ, ಗಲಭೆ, ಹಲ್ಲೆ ಇನ್ನಿತರ ವಿಷಯದಲ್ಲಿ ದೂರು ದಾಖಲಾಗಿ ಎನ್‌ಸಿಆರ್‌ ದಾಖಲಾಗಿದ್ದರೆ ಅಂಥಹ ವ್ಯಕ್ತಿ ಸಮಾಜಕ್ಕೆ ಮಾರಕ ಎಂದು ಪರಿಗಣಿಸಿ ವ್ಯಕ್ತಿಯ ವಿರುದ್ಧ ರೌಡಿ ಶೀಟ್‌ ತೆರೆಯಬಹುದು.

ಒಂದು ವೇಳೆ ಒಬ್ಬ ವ್ಯಕ್ತಿ ಮಾಡಿದ ಅಪರಾಧಗಳು ನ್ಯಾಯಾಲಯದಲ್ಲಿ ಸಾಬೀತಾಗದೇ ಹೋದರೂ ಕೂಡಾ ಆತನ ಮೇಲಿರುವ ಆರೋಪ, ದೂರುಗಳನ್ನು ಆಧರಿಸಿ ಕೂಡಾ ಪೊಲೀಸರು ರೌಡಿ ಶೀಟ್‌ ತೆರೆಯಬಹುದು.

ಪದೇ ಪದೇ ಕೊಲೆ, ಕೊಲೆಯತ್ನ, ಹಲ್ಲೆ, ಅಪಹರಣ, ಅತ್ಯಾಚಾರ, ಅತ್ಯಾಚಾರ ಯತ್ನ, ಇಂತಹ ಪ್ರಕರಣಗಳಲ್ಲಿ ವ್ಯಕ್ತಿಯ ಹೆಸರೇನಾದರೂ ಕೇಳಿ ಬಂದರೆ ಪೊಲೀಸರು ಅಂತಹ ವ್ಯಕ್ತಿ ವಿರುದ್ಧ ರೌಡಿ ಶೀಟ್‌ ತೆರೆಯುತ್ತಾರೆ. ಹಾಗೂ ಎನ್‌ಸಿಆರ್‌ ಆಧರಿಸಿ ಕೂಡಾ ರೌಡಿ ಶೀಟ್‌ ತೆರೆದ ಕೆಲವು ಉದಾಹರಣೆ ರಾಜ್ಯದಲ್ಲಿದೆ ಎಂದು ವರದಿಯಾಗಿದೆ.

ರೌಡಿಶೀಟ್‌ ಪಟ್ಟ ದೊರಕಿದರೆ ಆಗುವ ಸಮಸ್ಯೆಗಳೇನು?

ಸಮಾಜಕ್ಕೆ ಮಾರಕ ಎಂದು ಪೊಲೀಸ್‌ ವ್ಯವಸ್ಥೆ ಗುರುತಿಸುವುದರಿಂದ, ಆತನ ಚಲನವಲನಗಳ ಮೇಲೆ ನಿಗಾ ಇಡಲಾಗುತ್ತದೆ. ಜೊತೆಗೆ ಸಹಚರರ ಮೇಲೂ ನಿಗಾ ಇಡಲಾಗುತ್ತದೆ. ಬ್ಯಾಂಕ್‌ ಖಾತೆ ಮೇಲೂ ನಿಗಾ ಇಡಲಾಗುತ್ತದೆ.

ಜಾತ್ರೆ, ಚುನಾವಣೆ ಇತರ ಪ್ರಮುಖ ಕಾರ್ಯಕ್ರಮಗಳು ವ್ಯಕ್ತಿ ವಾಸಿಸುವ ಸ್ಥಳದ ಸುತ್ತಮುತ್ತ ನಡೆದರೆ ವ್ಯಕ್ತಿಯನ್ನು ವಶಕ್ಕೆ ಪಡೆದು ಗಡಿಪಾರು ಮಾಡಲಾಗುತ್ತದೆ. ಪಾಸ್‌ಪೋರ್ಟ್‌ ಜಪ್ತಿ, ವಿದೇಶಕ್ಕೆ ಹೋದರೆ ಕಾರಣ ನೀಡಿ ಹೋಗಬೇಕು. ರೌಡಿ ಪೆರೆಡ್‌ಗೆ ಹಾಜರಾಗಬೇಕು. ರಾಜಕೀಯ ಗಲಭೆ, ಕೋಮು ಗಲಭೆಗಳೇನಾದರೂ ಆದರೆ ಮೊದಲಿಗೆ ರೌಡಿ ಶೀಟರ್‌ಗಳನ್ನು ಪೊಲೀಸರು ವಶ ಪಡೆದು ವಿಚಾರಣೆ ಮಾಡುತ್ತಾರೆ. ಹಾಗೆನೇ ಕೆಲವೊಂದು ಸಾಮಾಜಿಕ ನಿರ್ಬಂಧಗಳನ್ನು ರೌಡಿಶೀಟರ್‌ಗೆ ಅನ್ವಯವಾಗುತ್ತದೆ.

ಕನಿಷ್ಟ ನಾಲ್ಕು ವರ್ಷಗಳ ಕಾಲ ಈ ರೌಡಿಶೀಟ್ ತರೆದರೆ ಹಾಗೇ ಇರುತ್ತದೆ. ಅನಂತರ ಪೊಲೀಸರಿಗೆ ರೌಡಿ ಶೀಟರ್‌ನ ಚಲನವಲನ, ವ್ಯಕ್ತಿತ್ವದಲ್ಲಿ ಸುಧಾರಣೆಯಾದರೆ ಅದು ಪೊಲೀಸರಿಗೆ ಸರಿ ಅನಿಸಿದರೆ ಎಸ್‌ಪಿಗೆ ವರದಿ ನೀಡಿ, ಎಸ್‌ಪಿ ಅವರು ವರದಿ ಆಧರಿಸಿ ರೌಡಿಶೀಟ್‌ನಿಂದ ತೆಗೆಯುವ ಅಧಿಕಾರ ಇರುತ್ತದೆ. ಯಾವುದೇ ವ್ಯಕ್ತಿಯನ್ನು ರೌಡಿಶೀಟ್‌ನಿಂದ ತೆಗೆಯುವ ಅಧಿಕಾರ ಎಸ್‌ಪಿಗೆ ಮಾತ್ರ ಇರುತ್ತದೆ.

Dengue: ರಾಜ್ಯದಲ್ಲಿ ಡೆಂಗ್ಯೂಗೆ ಮೊದಲ ಬಲಿ

 

Advertisement
Advertisement