For the best experience, open
https://m.hosakannada.com
on your mobile browser.
Advertisement

Actor Darshan Arrest: ನಟ ದರ್ಶನ್‌ ಮಾಜಿ ಮ್ಯಾನೇಜರ್‌ ಮಲ್ಲಿಕಾರ್ಜುನ್‌ ಎಲ್ಲಿ? ʼಡಿʼ ಗ್ಯಾಂಗ್‌ ಮೇಲೆ ಅನುಮಾನ

Actor Darshan Arrest: ಒಂದು ಕೋಟಿ ರೂಪಾಯಿ ವಂಚನೆ ಆರೋಪವನ್ನು ದರ್ಶನ್‌ ಮ್ಯಾನೇಜರ್‌ ಮೇಲೆ ಅರ್ಜುನ್‌ ಸರ್ಜಾ ದೂರು ನೀಡಿದ್ದರು.
12:49 PM Jun 14, 2024 IST | ಸುದರ್ಶನ್
UpdateAt: 12:49 PM Jun 14, 2024 IST
actor darshan arrest  ನಟ ದರ್ಶನ್‌ ಮಾಜಿ ಮ್ಯಾನೇಜರ್‌ ಮಲ್ಲಿಕಾರ್ಜುನ್‌ ಎಲ್ಲಿ  ʼಡಿʼ ಗ್ಯಾಂಗ್‌ ಮೇಲೆ ಅನುಮಾನ
Advertisement

Actor Darshan Arrest: ನಟ ದರ್ಶನ್‌ ಅವರ ಬಳಿ 2011 ರಿಂದ ಮ್ಯಾನೇಜರ್‌ ಆಗಿ ಕೆಲಸ ಮಾಡುತ್ತಿದ್ದ ಮಲ್ಲಿಕಾರ್ಜುನ್‌ ಸಂಕನಗೌಡರ್‌ 2018 ರಿಂದ ನಾಪತ್ತೆಯಾಗಿದ್ದು, ಇದೀಗ ರೇಣುಕಾಸ್ವಾಮಿ ಕೊಲೆ ಕೇಸಿನ ಬಳಿಕ ಈ ವಿಚಾರ ಕೂಡಾ ಮುನ್ನಲೆಗೆ ಬಂದಿದೆ.

Advertisement

ರೇಣುಕಾ ಸ್ವಾಮಿ ಹತ್ಯೆ ಪ್ರಕರಣ; ಬಚಾವ್ ಆಗಲು ದರ್ಶನ್ ನಿಂದ ಕೋಟಿ ಕೋಟಿ ಆಮಿಷ !!

ಮಲ್ಲಿಕಾರ್ಜುನ್‌ ಅವರು ಅರ್ಜುನ್‌ ಸರ್ಜಾ ನಿರ್ಮಾಣದ ಪ್ರೇಮಬರಹ ಚಿತ್ರದ ವಿತರಣೆಯಲ್ಲಿ ವಂಚನೆ ಆರೋಪ ಎದುರಿಸಿದ್ದು, ಆ ಸಂದರ್ಭದಲ್ಲಿ ಒಂದು ಕೋಟಿ ರೂಪಾಯಿ ವಂಚನೆ ಆರೋಪವನ್ನು ದರ್ಶನ್‌ ಮ್ಯಾನೇಜರ್‌ ಮೇಲೆ ಅರ್ಜುನ್‌ ಸರ್ಜಾ ದೂರು ನೀಡಿದ್ದರು.

Advertisement

ಆ ಬಳಿಕ ಈ ವಿಷಯದ ಕುರಿತು ದರ್ಶನ್‌ ಮಲ್ಲಿಕಾರ್ಜುನ್‌ ಮೇಲೆ ಸಿಟ್ಟುಗೊಂಡಿದ್ದು, ನಂತರ ರಾತ್ರೋರಾತ್ರಿ ಮಲ್ಲಿಕಾರ್ಜುನ್ ನಾಪತ್ತೆಯಾಗಿದ್ದರು. ಮಲ್ಲಿಕಾರ್ಜುನ್‌ ಅವರ ಮೇಲೆ ದರ್ಶನ್‌ಗೆ ಸೇರಿದ 10 ಕೋಟಿ ರೂ. ವಂಚನೆ ಮಾಡಲಾಗಿತ್ತು ಎಂಬ ಆರೋಪ ಕೇಳಿ ಬಂದಿತ್ತು. ಮಲ್ಲಿಕಾರ್ಜುನ್‌ ಅವರು ನಾಪತ್ತೆ ಮೊದಲು ತಮ್ಮ ಪತ್ನಿಗೆ ಪತ್ರವೊಂದನ್ನು ಬರೆದಿದ್ದಾರೆ ಎನ್ನಲಾಗಿದೆ.

ಇದೀಗ ರೇಣುಕಾಸ್ವಾಮಿ ಕೊಲೆ ಪ್ರಕರಣ ಬೆಳಕಿಗೆ ಬಂದ ಬಗ್ಗೆ ಮಲ್ಲಿಕಾರ್ಜುನ್‌ ಬಗ್ಗೆ ಅನುಮಾನ ಮೂಡಲು ಶುರುವಾಗಿದೆ. ಮಲ್ಲಿಕಾರ್ಜುನ್‌ ಸಂಕನಗೌಡರ್‌ ಬದುಕಿದ್ದಾರಾ? ಅಥವಾ ರೇಣುಕಾಸ್ವಾಮಿಯಂತೆ ಮೋರಿ ಪಾಲಾಗಿದ್ದಾರಾ? ಎನ್ನುವ ಸಂಶಯ ಸಾರ್ವಜನಿಕರಿಗೆ ಕಾಡತೊಡಗಿದೆ.

Bigg Boss Siri: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಿಗ್‌ಬಾಸ್‌ ಸ್ಪರ್ಧಿ ʼಸಿರಿʼ; ಹುಡುಗ ಯಾರು?

Advertisement
Advertisement
Advertisement