For the best experience, open
https://m.hosakannada.com
on your mobile browser.
Advertisement

Actor Darshan arrested in Murder: ರೇಣುಕಾಸ್ವಾಮಿಯನ್ನು ವಿಕೃತವಾಗಿ ಕೊಲೆ; ದೇಹದಲ್ಲಿ 15 ಕಡೆ ಭೀಕರ ಗಾಯ

Actor Darshan arrested in Murder: ರೇಣುಕಾ ಸ್ವಾಮಿಯನ್ನು ಯಾವ ರೀತಿ ಚಿತ್ರಹಿಂಸೆ ನೀಡಿ ವಿಕೃತವಾಗಿ ಕೊಲೆ ಮಾಡಲಾಗಿದೆ ಎಂದು ಮರಣೋತ್ತರ ಪರೀಕ್ಷೆಯಿಂದ ತಿಳಿದು ಬಂದಿದೆ.
04:29 PM Jun 11, 2024 IST | ಸುದರ್ಶನ್
UpdateAt: 04:29 PM Jun 11, 2024 IST
actor darshan arrested in murder  ರೇಣುಕಾಸ್ವಾಮಿಯನ್ನು ವಿಕೃತವಾಗಿ ಕೊಲೆ  ದೇಹದಲ್ಲಿ 15 ಕಡೆ ಭೀಕರ ಗಾಯ

Actor Darshan arrested in Murder: ಬೆಂಗಳೂರಿನಲ್ಲಿ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಬೆನ್ನಲ್ಲೇ ಇದೀಗ ನಟ ದರ್ಶನ್‌ ಸೇರಿ ನಟಿ ಪವಿತ್ರಾ ಗೌಡ ಸೇರಿ 10 ಕ್ಕೂ ಹೆಚ್ಚು ಮಂದಿಯನ್ನು ಅರೆಸ್ಟ್‌ ಆದ ಕೂಡಲೇ ಒಂದೊಂದೇ ವಿಚಾರ ಹೊರಗಡೆ ಬರ್ತಾ ಇದೆ.

Advertisement

ಕೆನರಾ ಬ್ಯಾಂಕ್ ಖಾತೆ ಇದ್ದರೆ ಸಾಕು!ಅತೀ ಕಡಿಮೆ ಬಡ್ಡಿಯಲ್ಲಿ 10 ಲಕ್ಷದವರೆಗೆ ಸಾಲ ಸೌಲಭ್ಯ ಖಚಿತ!

ಉಳಿದ ಹಾಗೆ ರೇಣುಕಾ ಸ್ವಾಮಿಯನ್ನು ಯಾವ ರೀತಿ ಚಿತ್ರಹಿಂಸೆ ನೀಡಿ ವಿಕೃತವಾಗಿ ಕೊಲೆ ಮಾಡಲಾಗಿದೆ ಎಂದು ಮರಣೋತ್ತರ ಪರೀಕ್ಷೆಯಿಂದ ತಿಳಿದು ಬಂದಿದೆ. ರೇಣುಕಾ ಸ್ವಾಮಿ ದೇಹದ ಮೇಲೆ ಬರೋಬ್ಬರಿ 15 ಕಡೆ ಭಾರೀ ಗಾತ್ರದ ಗಾಯಗಳಾಗಿದೆ. ಈ ಕುರಿತು ಫಾರೆನ್ಸಿಕ್‌ ವೈದ್ಯರು ಮಾಹಿತಿ ನೀಡಿದ್ದಾರೆ.

Advertisement

ಮೂಗು, ಕಾಲು, ತಲೆ , ಬೆನ್ನು, ದವಡೆ ಸೇರಿ ಮೃತದೇಹದಲ್ಲಿ 15 ಕಡೆ ಗಾಯಗಳಾಗಿದೆ. ಮರದ ಸಲಾಕೆ, ರಾಡ್‌, ಕಟ್ಟಿಗೆಯ ಮೂಲಕ ಹಲ್ಲೆ ನಡೆದಿದೆ ಎನ್ನಲಗಿದೆ.

ರೇಣುಕಾಸ್ವಾಮಿ ಮೃತದೇಹದ ಮರಣೋತ್ತರ ಪರೀಕ್ಷೆ ಮುಗಿದ ನಂತರ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದ್ದು, ಕುಟುಂಬದವರು ಚಿತ್ರದುರ್ಗಕ್ಕೆ ಮೃತದೇಹ ಕೊಂಡೊಯ್ಯಲು ನಿರ್ಧಾರ ಮಾಡಿದ್ದು, ಇಂದೇ ಶವಸಂಸ್ಕಾರ ನಡೆಸಲು ತೀರ್ಮಾನ ಮಾಡಲಾಗಿದೆ.

ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ತೂಗುದೀಪ ಶಿಕ್ಷೆಗೆ ಆಗ್ರಹಿಸಿ ಟ್ವೀಟ್ ಮಾಡಿರುವ ನಟಿ ರಮ್ಯಾ

Advertisement
Advertisement
Advertisement