ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Fire Incident: ಕೆನಡಾದಲ್ಲಿ ಭಾರತೀಯ ಮೂಲದ ದಂಪತಿ, ಮಗಳು ಸೇರಿ ಮೂವರು ಸಜೀವ ದಹನ

09:46 AM Mar 16, 2024 IST | ಮಲ್ಲಿಕಾ ಪುತ್ರನ್
UpdateAt: 09:46 AM Mar 16, 2024 IST
Advertisement

Fire Incident: ಭಾರತೀಯ ಮೂಲದ ಕುಟುಂಬವೊಂದು ಕೆನಡಾದ ಒಟಾರಿಯೊದಲ್ಲಿ ನಿಗೂಢವಾಗಿ ಮೃತ ಹೊಂದಿದ ಘಟನೆಯೊಂದು ನಡೆದಿದೆ.

Advertisement

ಇದನ್ನೂ ಓದಿ: 5-Day Banking: ಬ್ಯಾಂಕ್‌ಗಳಲ್ಲಿ 5 ದಿನ ಕೆಲಸ: ಹಣಕಾಸು ಸಚಿವರಿಂದ ಮಹತ್ವದ ಹೇಳಿಕೆ; ವದಂತಿಗಳಿಗೆ ಗಮನ ಕೊಡಬೇಡಿ

ಮೃತರನ್ನು ರಾಜೀವ್‌ ವಾರಿಕೂ (51), ಪತ್ನಿ ಶಿಲ್ಪಾ ಕೋಥಾ (47) ಮತ್ತು ಮಗಳು ಮಾಹೆಕ್‌ ವಾರಿಕೊ (16) ಎಂದು ಗುರುತಿಸಲಾಗಿದೆ.

Advertisement

ಕೆನಡಾದ ಒಂಟಾರಿಯೊದಲ್ಲಿ ಈ ಕುಟುಂಬ ವಾಸವಾಗಿತ್ತು. ಮನೆಗೆ ಬೆಂಕಿ ತಗುಲಿ ಮೂವರು ಮೃತ ಹೊಂದಿದ್ದಾರೆ ಎನ್ನಲಾಗಿದೆ. ಆದರೆ ಬೆಂಕಿ ಹೇಗೆ ಹೊತ್ತಿಕೊಂಡಿತು ಎನ್ನುವುದು ಇನ್ನೂ ನಿಗೂಢವಾಗಿದೆ ಎನ್ನುತ್ತಾರೆ ಪೊಲೀಸರು.

ಇದನ್ನೂ ಓದಿ: Asaduddin Owaisi On CAA: ಸಿಎಎ ಕುರಿತು ಓಬೈಸಿ ವಾಗ್ದಾಳಿ; 12 ಲಕ್ಷ ಹಿಂದೂಗಳು ಸೇಫ್‌, 1.5 ಲಕ್ಷ ಮುಸಲ್ಮಾನರ ಗತಿ ಏನು?

ಮೂಲಗಳ ಪ್ರಕಾರ ಈ ಕುಟುಂಬ ಹದಿನೈದು ವರ್ಷಗಳಿಂದ ಇಲ್ಲೇ ವಾಸವಾಗಿತ್ತು. ಕುಟುಂಬದವರ ಮಧ್ಯೆ ಯಾವುದೇ ಸಮಸ್ಯೆ ಇರಲಿಲ್ಲ ಎಂದು ಹೇಳಲಾಗಿದೆ. ಬೆಂಕಿ ಹೊತ್ತಿಕೊಂಡದ್ದನ್ನು ಕಂಡು ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಕೂಡಲೇ ಸ್ಥಳಕ್ಕೆ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸುವಷ್ಟರಲ್ಲಿ ಮನೆ ಸಂಪೂರ್ಣ ಸುಟ್ಟು ಹೋಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಸುಟ್ಟು ಕರಕಲಾದ ಮನೆಯ ಅವಶೇಷಗಳ ಅಡಿಯಲ್ಲಿ ಮೂರೂ ಮೃತದೇಹಗಳು ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಹೇಳಲಾಗಿದೆ.

Advertisement
Advertisement