ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Toll Plaza: ದೇಶಾದ್ಯಂತ ಟೋಲ್ ಫ್ಲಾಜಾಗಳು ರದ್ದು, ಸದ್ಯದಲ್ಲೇ ಹೊಸ ಟೋಲ್ ಸಂಗ್ರಹ ವ್ಯವಸ್ಥೆ ಜಾರಿ !!

Toll Plaza: ವಾಹನ ಚಲಾವಣೆ, ರಸ್ತೆ ನಿಯಮಗಳು, ಟೋಲ್ ನಿಯಮಗಳ ಕುರಿತು ಕೇಂದ್ರ ಸಾರಿಗೆ ಇಲಾಖೆಯು ಆಗಾಗ ಹೊಸ ನಿಯಮಗಳನ್ನು ಜಾರಿಗೆ ತರುತ್ತದೆ
10:11 AM Mar 28, 2024 IST | ಸುದರ್ಶನ್

Toll Plaza: ವಾಹನ ಚಲಾವಣೆ, ರಸ್ತೆ ನಿಯಮಗಳು, ಟೋಲ್ ನಿಯಮಗಳ ಕುರಿತು ಕೇಂದ್ರ ಸಾರಿಗೆ ಇಲಾಖೆಯು ಆಗಾಗ ಹೊಸ ನಿಯಮಗಳನ್ನು ಜಾರಿಗೆ ತರುತ್ತದೆ. ಅಂತೆಯೇ ಇದೀಗ ಟೋಲ್(Toll Plaza) ಕಟ್ಟುವ ಬಗ್ಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಇಲಾಖೆಯು ಹೊಸ ನಿಯಮ ಜಾರಿಗೊಳಿಸುವ ಸುಳಿವು ನೀಡಿ ವಾಹನ ಸವಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟಿದೆ.

Advertisement

ಇದನ್ನೂ ಓದಿ: MGNREGA Wage Rates Hike: ಲೋಕಸಭೆ ಚುನಾವಣೆಗೂ ಮುನ್ನ ಸರ್ಕಾರದಿಂದ ದೊಡ್ಡ ಕೊಡುಗೆ, ನರೇಗಾ ವೇತನದಲ್ಲಿ ಬಂಪರ್ ಹೆಚ್ಚಳ

ಹೌದು, ಇನ್ಮುಂದೆ ವಾಹನ ಸವಾರರು ಟೋಲ್ ಫ್ಲಾಜಾಗಳಲ್ಲಿ ಟೋಲ್ ಕಟ್ಟುವಂತ ಪ್ರಮೇಯವೇ ಇರುವದಿಲ್ಲ. ಯಾಕೆಂದರೆ ವಾಹನ ಟೋಲ್ ಪ್ಲಾಜಾಗಳಲ್ಲಿ ತೆರಿಗೆ ಪಾವತಿಸುವ ಬದಲು, ಉಪಗ್ರಹ ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆಯನ್ನ ಜಾರಿಗೆ ತರಲಾಗುವುದು. ಈ ನಿಟ್ಟಿನಲ್ಲಿ ಶೀಘ್ರದಲ್ಲೇ ಟೋಲ್ ತೆರಿಗೆ ಸಂಗ್ರಹ ವ್ಯವಸ್ಥೆಯನ್ನ ಸಂಪೂರ್ಣವಾಗಿ ಬದಲಾಯಿಸಲಾಗುವುದು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ(Nithin Gadkhari) ಅವರು ಹೇಳಿದ್ದಾರೆ.

Advertisement

ಇದನ್ನೂ ಓದಿ: KSRTC Driver: ಡ್ರೈವರ್‌ಗಳಿಗೆ ಸಿಹಿ ಸುದ್ದಿ ನೀಡಿದ ಕೆಎಸ್‌ಆರ್‌ಟಿಸಿ

ಟೋಲ್ ತೆರಿಗೆ ಕುರಿತು ಮಾಹಿತಿ ನೀಡಿದ ಗಡ್ಕರಿ ಅವರು, ಉಪಗ್ರಹ ಆಧಾರಿತ ಟೋಲ್ ವ್ಯವಸ್ಥೆಯಾಗಲಿದೆ. ಈ ಕಾರ್ಯವಿಧಾನವು ಜನರ ಬ್ಯಾಂಕ್‌ ಖಾತೆಗಳಿಂದ ಹಣವನ್ನು ಸ್ವಯಂಚಾಲಿತವಾಗಿ ಕಡಿತಗೊಳಿಸಲಾಗುತ್ತದೆ. ಬ್ಯಾಂಕ್‌ ಖಾತೆಗಳಿಂದ ಕಡಿತಗೊಳಿಸಲಾದ ಮೊತ್ತವನ್ನು ಪ್ರಯಾಣಿಸುವವರು ಬಳಸುವ ರಸ್ತೆ ಆಧಾರದ ಮೇಲೆ ಲೆಕ್ಕ ಹಾಕಲಾಗುವುದು. ಇದರರ್ಥ ಶುಲ್ಕ ಅಥವಾ ಕಡಿತಗೊಳಿಸಲಾದ ಮೊತ್ತವು ಹೆದ್ದಾರಿಗಳಲ್ಲಿ ಕ್ರಮಿಸಿದ, ಪ್ರಯಾಣಿಸಿದ ದೂರವನ್ನು ಆಧರಿಸಿರುತ್ತದೆ ಎಂದು ಭರವಸೆ ನೀಡಿದ್ದಾರೆ.

Advertisement
Advertisement
Next Article