ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Mangaluru: ಹಿಂದುತ್ವದ ಕೋಟೆ ಬೇಧಿಸಿ ಈ ಬಾರಿ ಜಯ; ಕಾಂಗ್ರೆಸ್‌ ತೆಕ್ಕೆಗೆ ಕ್ಷೇತ್ರ- ಅಭಯಚಂದ್ರ ಜೈನ್‌

Mangaluru: ನಳಿನ್‌ ಕುಮಾರ್‌ ಕಟೀಲ್‌ ಅಭಿವೃದ್ಧಿ ವಿಚಾರದಲ್ಲಿ ದೇಶದಲ್ಲೇ ನಂ.1 ಸಂಸದ ಎಂದು ಹೇಳಿಕೊಳ್ಳುವುದಾದರೆ, ಅವರಿಗೆ ಈ ಬಾರಿ ಬಿಜೆಪಿ ಟಿಕೆಟ್‌ ಯಾಕೆ ದೊರಕಿಲ್ಲ?
01:24 PM Mar 30, 2024 IST | ಸುದರ್ಶನ್
UpdateAt: 01:56 PM Mar 30, 2024 IST
Advertisement

Mangaluru: ಇಂದು ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್‌ ಮುಖಂಡ ಅಭಯ ಚಂದ್ರ ಜೈನ್‌ ಅವರು ನಳಿನ್‌ ಕುಮಾರ್‌ ಕಟೀಲ್‌ ಅಭಿವೃದ್ಧಿ ವಿಚಾರದಲ್ಲಿ ದೇಶದಲ್ಲೇ ನಂ.1 ಸಂಸದ ಎಂದು ಹೇಳಿಕೊಳ್ಳುವುದಾದರೆ, ಅವರಿಗೆ ಈ ಬಾರಿ ಬಿಜೆಪಿ ಟಿಕೆಟ್‌ ಯಾಕೆ ದೊರಕಿಲ್ಲ? ಎಂದು ಪ್ರಶ್ನೆಯನ್ನು ಮಾಡಿದ್ದಾರೆ.

Advertisement

ಇದನ್ನೂ ಓದಿ: Lok Sabha Elections Holiday: ಎ.26 ರಂದು ಸಾರ್ವಜನಿಕ ರಜೆ ಸಾರಿದ ಕೇರಳ

ನಳಿನ್‌ ಸಂಸದರಾಗಿ ಅಭಿವೃದ್ಧಿ ಕೆಲಸ ಮಾಡಿಲ್ಲ. ಪ್ರಾರಂಭ ಮಾಡಿದ ಕಾಮಗಾರಿಗಳನ್ನು ಪೂರ್ಣಗೊಳಿಸುವ ಕೆಲಸ ಕುಡಾ ಬಿಜೆಪಿಯವರಿಂದ ಆಗಿಲ್ಲ. ಕೇವಲ ಪ್ರಚಾರ, ಭಾವನಾತ್ಮಕ ವಿಚಾರ ಮುಂದಿಟ್ಟು ಚುನಾವಣೆ ಗೆಲ್ಲಲು ಬಿಜೆಪಿ ಪ್ರಯತ್ನ ಮಾಡುತ್ತಿದೆ. ಈ ಬಾರಿ ಜನರಿಗೆ ಅರ್ಥವಾಗಿದೆ. ಈ ಬಾರಿ ಗೆಲುವು ಕಾಂಗ್ರೆಸ್‌ದು. ಬಿಜೆಪಿಯವರು ಐಷರಾಮಿ ಜೀವನ ನಡೆಸುತ್ತಿದ್ದಾರೆ. ಮೋದಿಯ ಭಾಷಣಕ್ಕೆ ಯುವಕರು ಮರುಳಾಗುತ್ತಿದ್ದು, ಕಾಂಗ್ರೆಸ್‌ ದೇಶಕ್ಕೆ ನೀಡಿದ ಕೊಡುಗೆಯನ್ನು ಅವರಿಗೆ ತಿಳಿಸಬೇಕಿದೆ ಎಂದು ಹೇಳಿದರು.

Advertisement

ಇದನ್ನೂ ಓದಿ: Dream of death: ಕನಸಲ್ಲಿ ಇವುಗಳು ಕಂಡರೆ ಸಾವು ಹತ್ತಿರವಾಗಿದೆ ಎಂದರ್ಥ !!

ಮಂಗಳೂರು ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪ್ರಾಮಾಣಿಕ, ಸರಳತೆಯ ಪದ್ಮರಾಜ್‌ ಅವರನ್ನು ಕಣಕ್ಕಿಳಿಸಿದ್ದು ಅವರ ಗೆಲುವು ಖಚಿತ. ಬಿಜೆಪಿಯ ಬಂಡವಾಳವೇ ಸುಳ್ಳು. ಹಿಂದುತ್ವದ ಕೋಟೆ ಬೇಧಿಸಿ ಜಯ ಸಾಧಿಸುತ್ತೇವೆ. ಕಾಂಗ್ರೆಸ್‌ ತೆಕ್ಕೆಗೆ ಕ್ಷೇತ್ರವನ್ನು ತರುತ್ತೇವೆ ಎಂದು ಹೇಳಿದರು.

Advertisement
Advertisement