ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

7th Pay Commission: ನಿವೃತ್ತ ಸರ್ಕಾರಿ ನೌಕರರಿಗೆ ಹೊಸ ವೇತನ ಶ್ರೇಣಿಯ ಟೆನ್ಷನ್!

7th Pay Commission: 7ನೇ ವೇತನ ಆಯೋಗದ (7th Pay Commission) ವರದಿ ಯಾವಾಗ ಜಾರಿ ಆಗುತ್ತೆ ಎಂದು, ಕರ್ನಾಟಕದ ಲಕ್ಷ ಸರ್ಕಾರಿ ನೌಕರರು ಮತ್ತು ಲಕ್ಷಾಂತರ ನಿವೃತ್ತ ನೌಕರರು ಕಾಯುತ್ತಿದ್ದಾರೆ. 
01:05 PM May 13, 2024 IST | ಸುದರ್ಶನ್
UpdateAt: 01:05 PM May 13, 2024 IST
Advertisement

7th Pay Commission: ಕೆ. ಸುಧಾಕರ್‌ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗದ (7th Pay Commission) ವರದಿ ಯಾವಾಗ ಜಾರಿ ಆಗುತ್ತೆ ಎಂದು, ಕರ್ನಾಟಕದ ಲಕ್ಷ ಸರ್ಕಾರಿ ನೌಕರರು ಮತ್ತು ಲಕ್ಷಾಂತರ ನಿವೃತ್ತ ನೌಕರರು ಕಾಯುತ್ತಿದ್ದಾರೆ.

Advertisement

ಇದನ್ನೂ ಓದಿ: Iron Content: ಆಗಾಗ ತಲೆ ತಿರುಗೋದು, ಕಣ್ಣು ಮಂಜಾಗೋದು ಆಗುತ್ತಾ? ಡೇಂಜರ್, ಇದನ್ನು ತಿನ್ನಿ ಮೊದಲು

2023ರ ನವೆಂಬರ್‌ನಲ್ಲಿಯೇ ಕೆ. ಸುಧಾಕರ್‌ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗ ಸರ್ಕಾರಕ್ಕೆ ವರದಿ ನೀಡಲಿದೆ. ಫೆಬ್ರವರಿಯಲ್ಲಿ ಮಂಡಿಸುವ 2024-25ನೇ ಸಾಲಿನ ಬಜೆಟ್‌ನಲ್ಲಿ ಘೋಷಣೆಯಾಗಲಿದೆ ಎಂದು ಸರ್ಕಾರಿ ನೌಕರರು ಭರವಸೆಯಲ್ಲಿದ್ದರು. ಆದರೆ ಸರ್ಕಾರ ಮಾರ್ಚ್‌ 15ರ ತನಕ ವೇತನ ಆಯೋಗದ ಅವಧಿ ವಿಸ್ತರಣೆ ಮಾಡಿತು. ಆದರೆ ವರದಿ ಸ್ವೀಕಾರ ಮಾಡಿದ ದಿನವೇ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿದೆ.

Advertisement

ಇದನ್ನೂ ಓದಿ: Weired Tradition: ಬೆತ್ತಲೆಯಾಗಿ ಹಡಗಿನಲ್ಲಿ ಹೋಗೋದೇ ಒಂದು ಹಬ್ಬವಂತೆ, ಇದಕ್ಕೆ ಕೊಡಬೇಕು ಲಕ್ಷ ಲಕ್ಷ!

ಈಗಾಗಲೇ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಕೇಂದ್ರ ಚುನಾವಣಾ ಆಯೋಗಕ್ಕೆ ನೀತಿ ಸಂಹಿತೆ ಸಡಿಲಗೊಳಿಸುವಂತೆ ಕೋರಿ ಪತ್ರವನ್ನು ಬರೆದಿದ್ದಾರೆ. ಇನ್ನು ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ರಾಜ್ಯದ 7ನೇ ವೇತನ ಆಯೋಗವು ಮಾರ್ಚ್‌ 16ರಂದು ವರದಿ ಸಲ್ಲಿಸಿದೆ. 'ಸರ್ಕಾರಿ ನೌಕರರ ಮೂಲವೇತನದ ಶೇಕಡ 27.5 ರಷ್ಟು ಹೆಚ್ಚಳ ಮಾಡಲು ಶಿಫಾರಸು ಮಾಡಿದೆ. ವರದಿಯನ್ನು ಪರಿಶೀಲಿಸಿ ಸರ್ಕಾರ ಸೂಕ್ತ ತೀರ್ಮಾನ ಕೈಗೊಳ್ಳಲಿದೆ' ಎಂದು ಮುಖ್ಯಮಂತ್ರಿಗಳು ಭರವಸೆ ಕೊಟ್ಟಿದ್ದಾರೆ.

ಆದರೆ ಚುನಾವಣಾ ನೀತಿ ಸಂಹಿತೆ ಮುಕ್ತಾಯಗೊಳ್ಳುವ ತನಕ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುವಂತಿಲ್ಲ. ವೇತನ ಆಯೋಗ ತನ್ನ ವರದಿಯಲ್ಲಿ 1/7/2022ರಿಂದ ಹೊಸ ವೇತನ ಶ್ರೇಣಿ ಅನುಷ್ಠಾನಗೊಳ್ಳಬೇಕು ಎಂದು ತಿಳಿಸಿದೆ. ಆದರೆ ಯಾವಾಗಿನಿಂದ ವೇತನ ಆಯೋಗದ ವರದಿ ಜಾರಿಯಾಗಬೇಕು ಎಂದು ಸರ್ಕಾರ ತೀರ್ಮಾನವನ್ನು ಕೈಗೊಳ್ಳಬೇಕಾಗಿದೆ.

ಈಗಾಗಲೇ ನಿವೃತ್ತರಾಗಲಿರುವ ನೌಕರರಿಗೆ ವರದಿಯ ಶಿಫಾರಸಿನಂತೆ ಸರ್ಕಾರ ಕೈಗೊಳ್ಳುವ ತೀರ್ಮಾನದಂತೆ ಪಿಂಚಣಿ ಸಿಗಲಿದೆ. ಆದರೆ ಹೊಸ ವೇತನ ಶ್ರೇಣಿ ಸಿಗಲಿಲ್ಲ ಎಂಬುದು ನೌಕರರ ಕೊರಗು. 70-80 ವರ್ಷ ವಯಸ್ಸಿನ ಪಿಂಚಣಿದಾರರಿಗೆ ಮೂಲ ಪಿಂಚಣಿಯ ಹೆಚ್ಚುವರಿ ಶೇ 10ರಷ್ಟನ್ನು ಆಯೋಗವು ಶಿಫಾರಸು ಮಾಡುತ್ತದೆ ಎಂದು ವರದಿಯಲ್ಲಿ ತಿಳಿಸಿದೆ. ಲೋಕಸಭೆ ಚುನಾವಣೆ ನೀತಿ ಸಂಹಿತೆ ಮುಗಿದ ತಕ್ಷಣ ಸರ್ಕಾರ ನೌಕರರ ಪ್ರಮುಖ ಬೇಡಿಕೆಯಾದ 7ನೇ ರಾಜ್ಯ ವೇತನ ಆಯೋಗದ ವರದಿ ಜಾರಿಗೆ ಬರಲಿದೆಯೋ ಎಂದು ಯಕ್ಷ ಪ್ರಶ್ನೆ ಆಗಿದೆ.

Related News

Advertisement
Advertisement