ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Deadly Accident Ambala: ಬಸ್‌ಗೆ ಟ್ರಕ್‌ ಡಿಕ್ಕಿ; ಒಂದೇ ಕುಟುಂಬದ 7 ಮಂದಿ ಸಾವು, 25 ಮಂದಿಗೆ ಗಾಯ

Deadly Accident Ambala: ಹರಿಯಾಣದ ಅಂಬಾಲದಲ್ಲಿ ಶುಕ್ರವಾರ (ಇಂದು) ನಸುಕಿನ ಸಮಯದಲ್ಲಿ ಟ್ರಕ್‌ವೊಂದು ಮಿನಿ ಬಸ್‌ಗೆ ಡಿಕ್ಕಿ ಹೊಡೆದ ಕಾರಣ ಏಳು ಜನ ಸಾವು.
09:09 AM May 24, 2024 IST | ಸುದರ್ಶನ್
UpdateAt: 09:11 AM May 24, 2024 IST
Advertisement

Deadly Accident Ambala: ಹರಿಯಾಣದ ಅಂಬಾಲದಲ್ಲಿ ಶುಕ್ರವಾರ (ಇಂದು) ನಸುಕಿನ ಸಮಯದಲ್ಲಿ ಟ್ರಕ್‌ವೊಂದು ಮಿನಿ ಬಸ್‌ಗೆ ಡಿಕ್ಕಿ ಹೊಡೆದ ಕಾರಣ ಏಳು ಜನ ಸಾವನ್ನಪ್ಪಿದ್ದು, ಇದರಲ್ಲಿ 25 ಮಂದಿ ಗಾಯಗೊಂಡಿರುವ ಘಟನೆಯೊಂದು ನಡೆದಿದೆ.

Advertisement

ಅಂಬಾಲಾ-ದೆಹಲಿ-ಜಮ್ಮು ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಭೀಕರ ಅಪಘಾತ ಸಂಭವಿಸಿದೆ. ವೈಷ್ಣೋದೇವಿಗೆಂದು ಯಾತ್ರಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಮಿನಿಬಸ್‌ಗೆ ಟ್ರಕ್‌ ಡಿಕ್ಕಿ ಹೊಡೆದಿದ್ದು, ಈ ಭೀಕರ ಅವಘಡ ಸಂಭವಿಸಿದೆ. ಈ ಅಪಘಾತದಲ್ಲಿ ಒಂದೇ ಕುಟುಂಬದ ಏಳು ಸದಸ್ಯರು ಸಾವನ್ನಪ್ಪಿದ್ದು, 25ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಚಾಲಕ ಕುಡಿದಿದ್ದು ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಬದುಕುಳಿದ ಸದಸ್ಯರು ಹೇಳಿದ್ದಾರೆ. ಒಂದೇ ಕುಟುಂಬಕ್ಕೆ ಸೇರಿದವರು ಅಪಘಾತ ಸಂಭವಿಸಿದಾಗ ನಿದ್ರೆಯಲ್ಲಿದ್ದರು ಎಂದು ಹೇಳಲಾಗಿದೆ.

Advertisement

Advertisement
Advertisement