Kollam Temple: ಜಾತ್ರೆಯಲ್ಲಿ ತಂದೆಯ ಕೈಯಿಂದ ಬಿದ್ದ 5 ವರ್ಷದ ಮಗು; ರಥದ ಚಕ್ರದಡಿ ಸಿಲುಕಿ ದಾರುಣ ಸಾವು
Kollam Temple: ಜಾತ್ರೆಯ ರಥದ ಚಕ್ರದಡಿ ಬಿದ್ದು ಐದು ವರ್ಷದ ಬಾಲಕಿ ಮೃತ ಹೊಂದಿರುವ ಘಟನೆಯೊಂದು ಕೇರಳದ ಕೊಲ್ಲಂನಲ್ಲಿ ನಡೆದಿದೆ
01:09 PM Mar 25, 2024 IST
|
ಸುದರ್ಶನ್
UpdateAt: 01:12 PM Mar 25, 2024 IST
Advertisement
Kollam Temple: ಜಾತ್ರೆಯ ರಥದ ಚಕ್ರದಡಿ ಬಿದ್ದು ಐದು ವರ್ಷದ ಬಾಲಕಿ ಮೃತ ಹೊಂದಿರುವ ಘಟನೆಯೊಂದು ಕೇರಳದ ಕೊಲ್ಲಂನಲ್ಲಿ ನಡೆದಿದೆ. ಈ ಘಟನೆ ಭಾನುವಾರ ನಡೆದಿದೆ.
Advertisement
ಇದನ್ನೂ ಓದಿ: Court Judge Suicide: ಪತ್ನಿಯ ಜೊತೆ ಜಗಳ; ಆತ್ಮಹತ್ಯೆ ಮಾಡಿಕೊಂಡ ನ್ಯಾಯಾಧೀಶ
ಕ್ಷೇತ್ರ (5) ಎಂಬಾಕೆಯೇ ಮೃತ ಬಾಲಕಿ. ಈಕೆ ತನ್ನ ಅಪ್ಪ ಅಮ್ಮನ ಜೊತೆ ಕೊಟ್ಟಂಕುಳಂಗರ ದೇವಸ್ಥಾನದ ಜಾತ್ರೆಗೆಂದು ಹೋಗಿದ್ದು, ಅಲ್ಲಿ ರಥ ಎಳೆಯುವ ಸಂದರ್ಭದಲ್ಲಿ ಜನರ ನೂಕುನುಗ್ಗಲು ಉಂಟಾಗಿದೆ. ಈ ಸಂದರ್ಭದಲ್ಲಿ ಅಪ್ಪನ ಕೈಯಲ್ಲಿದ್ದ ಮಗು ಆಕಸ್ಮಿಕವಾಗಿ ಕೆಳಗೆ ಬಿದ್ದಿದ್ದಾಳೆ. ಮಗುವಿನ ಮೇಲೆ ರಥದ ಚಕ್ರ ಹರಿದಿದ್ದು, ಪರಿಣಾಮ ಮಗುವಿನ ಪ್ರಾಣ ಹೋಗಿದೆ.
Advertisement
ಇದನ್ನೂ ಓದಿ: Shimoga: ರಸ್ತೆ ದಾಟುವ ಸಂದರ್ಭ ಅಪಘಾತ; ಪರೀಕ್ಷೆ ಬರೆಯಬೇಕಾಗಿದ್ದ SSLC ವಿದ್ಯಾರ್ಥಿನಿ ಸಾವು
ಕೂಡಲೇ ಮಗು ಕ್ಷೇತ್ರಳನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ ಪ್ರಾಣ ಉಳಿಸಲು ಸಾಧ್ಯವಾಗಿಲ್ಲ. ಈ ಕುರಿತು ಪ್ರಕರಣ ದಾಖಲಾಗಿದೆ.
Advertisement