Farmers: ರೈತನ ವರಿಸುವ ಕನ್ಯೆಗೆ 5 ಲಕ್ಷ ರೂ.
Farmers: ರೈತ ಹುಡುಗನನ್ನು ಮದುವೆಯಾಗುವ ಯುವತಿಗೆ ಸರಕಾರದಿಂದ 5 ಲಕ್ಷ ರೂ. ಪ್ರೋತ್ಸಾಹಧನ ನೀಡಬೇಕು ಎಂದು ರೈತ ಸಂಘಟನೆಗಳ ಪ್ರತಿನಿಧಿಗಳು ಸಿಎಂ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: Divorce: ಸ್ಪೈಡರ್ ಮ್ಯಾನ್ ಬಾಳಲ್ಲಿ ಬಿರುಗಾಳಿ: ವಿಚ್ಛೇದನಕ್ಕೆ ಮುಂದಾದ ದಂಪತಿ
ಬಜೆಟ್ ಸಿದ್ಧತೆ ಸಂಬಂಧ ರೈತ ಸಂಘಟನೆಗಳ ಸುಮಾರು 218 ಪ್ರತಿನಿಧಿಗಳು, ಮುಖಂಡರೊಂದಿಗೆ ಸಿಎಂ ಸಿದ್ದರಾಮಯ್ಯ ಅವರು ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಭಾನುವಾರ ಸಭೆ ನಡೆಸಿದರು. ''ಕೃಷಿಕರ ಮಕ್ಕಳಿಗೆ ಹೆಣ್ಣುಸಿಗುತ್ತಿಲ್ಲ. 45 ವರ್ಷವಾದರೂ ಮದುವೆಯಾಗುತ್ತಿಲ್ಲ. ಇದರಿಂದಾಗಿ ಕೃಷಿಗೂ ಆದ್ಯತೆ ಸಿಗುತ್ತಿಲ್ಲ. ಹಾಗಾಗಿ, ರೈತನನ್ನು ವಿವಾಹವಾಗುವ ಹುಡುಗಿಗೆ ಪ್ರೋತ್ಸಾಹ ಧನ ನೀಡಬೇಕು,'' ಎಂದು ಬಡಗಲಪುರ ನಾಗೇಂದ್ರ ಈ ವೇಳೆ ಒತ್ತಾಯಿಸಿದರು.
ಇದನ್ನೂ ಓದಿ: 7th Pay Commission: 7ನೇ ವೇತನ ಆಯೋಗ ಜಾರಿಗೆ ಸಿದ್ದರಾಮಯ್ಯ ಗ್ರೀನ್ ಸಿಗ್ನಲ್ ?!
ರೈತರ ಸಾಲ ಮನ್ನಾಕ್ಕೂ ಆಗ್ರಹಿಸಲಾಗಿದೆ. ಕೃಷಿಗೆ ಹೆಚ್ಚಿನ ಉತ್ತೇಜನ ಕೊಡಬೇಕು. ರೈತಪರ ಬಜೆಟ್ ಮಂಡಿಸಬೇಕು ಎಂದು ಕೇಳಿಕೊಳ್ಳಲಾಗಿದೆ ಎಂದು ರೈತ ಪ್ರತಿನಿಧಿಗಳು ತಿಳಿಸಿದರು. ಗ್ಯಾರಂಟಿ ಯೋಜನೆ ಬಗ್ಗೆಯೂ ರೈತ ಮುಖಂಡರು ಮೆಚ್ಚುಗೆ ವ್ಯಕ್ತಪಡಿಸಿದರು. ರೈತಪರ ಸಂಘಟನೆಗಳ ಚುಕ್ಕಿ ನಂಜುಂಡಸ್ವಾಮಿ, ಎಚ್.ಆರ್.ಬಸವರಾಜಪ್ಪ ಪಾಲ್ಗೊಂಡಿದ್ದರು.
ಬದ್ಧತೆಯ ಸರಕಾರ: ಬಜೆಟ್ ಸಿದ್ಧತೆ ಸಂಬಂಧ ದಲಿತ ಸಂಘಟನೆಗಳ ಸಭೆ ನಡೆಸಿದ ಸಿಎಂ ಸಿದ್ದರಾಮಯ್ಯ, "ಎಸ್‌ಸಿಪಿ/ಟಿಎಸ್‌ಪಿ ಕಾಯಿದೆ ದುರುಪಯೋಗ ತಡೆಯಲು ಈ ಕಾಯಿದೆಯ ಸೆಕ್ಷನ್ 7ಡಿ ತೆಗೆದು ಹಾಕಲಾಗಿದೆ. ನಮ್ಮದು ಬದ್ಧತೆಯ ಸರಕಾರ,'' ಎಂದರು.