For the best experience, open
https://m.hosakannada.com
on your mobile browser.
Advertisement

5,8,9 Board Exam: ಮುಗಿದ ಮೌಲ್ಯಾಂಕನ ಪರೀಕ್ಷೆ

5,8,9. Board Exam: ವಿವಾದಕ್ಕೆ ಕಾರಣವಾಗಿದ್ದ 5, 8 ಮತ್ತು 9 ಪರೀಕ್ಷೆಯು ತರಗತಿ ಮೌಲ್ಯಾಂಕನ ಗುರುವಾರ( Thursday ) ಮುಕ್ತಾಯಗೊಂಡಿದೆ.
09:30 AM Mar 29, 2024 IST | ಸುದರ್ಶನ್
5 8 9 board exam  ಮುಗಿದ ಮೌಲ್ಯಾಂಕನ ಪರೀಕ್ಷೆ

5,8,9 Board Exam: ವಿವಾದಕ್ಕೆ ಕಾರಣವಾಗಿದ್ದ 5, 8 ಮತ್ತು 9 ಪರೀಕ್ಷೆಯು ತರಗತಿ ಮೌಲ್ಯಾಂಕನ ಗುರುವಾರ ಮುಕ್ತಾಯಗೊಂಡಿದೆ. ಈಗಾಗಲೇ ಮೌಲ್ಯಮಾಪನ ಕಾರ್ಯ ಸಹ ತಾಲೂಕು ಹಂತದಲ್ಲಿ ಆರಂಭವಾಗಿದೆ.

Advertisement

ಇದನ್ನೂ ಓದಿ: Weather Report: ರಾಜ್ಯದಲ್ಲಿ ಮುಂದಿನ 5 ದಿನ ಉಷ್ಣ ಅಲೆ, ಅಲ್ಲಲ್ಲಿ ಮಳೆ; IMD ಎಚ್ಚರಿಕೆ !

ಮೊದಲು ಎರಡು ಪರೀಕ್ಷೆ ಮುಗಿದ ಬಳಿಕ ಮೌಲ್ಯಾಂಕನ ಪರೀಕ್ಷೆಗೆ ತಡೆ ನೀಡಲಾಗಿತ್ತು. ಇದಾದ ಬಳಿಕ ಮತ್ತೆ ಪರೀಕ್ಷೆ ನೀಡಲು ಕೋರ್ಟ್ ತೀರ್ಪು ನೀಡಿತ್ತು. ಈ ಹಿನ್ನೆಲೆಯಲ್ಲಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಾಂಕನ ಮಂಡಳಿಯು ಎಸ್ಸೆಸ್ಸೆಲ್ಸಿ ಪರೀಕ್ಷಾ ದಿನದಂದೇ ಉಳಿದ ವಿಷಯಗಳ ಪರೀಕ್ಷೆ ಸಹ ಆರಂಭಿಸಿತ್ತು. ಬೆಳಗ್ಗೆ ಎಸ್ಸೆಸ್ಸೆಲ್ಸಿ ಮತ್ತು ಮಧ್ಯಾಹ್ನ ಮೌಲ್ಯಾಂಕನ ಪರೀಕ್ಷೆ ಹಾಗೂ ಎಸ್ಸೆಸ್ಸೆಲ್ಸಿ ಪರೀಕ್ಷೆ ಇಲ್ಲದ ದಿನ ಬೆಳಗ್ಗೆಯೇ ಮೌಲ್ಯಾಂಕನ ಪರೀಕ್ಷೆ ನಡೆಸಿತ್ತು

Advertisement

ಇದನ್ನೂ ಓದಿ: Belthangady: ತುಮಕೂರು ತ್ರಿಬ್ಬಲ್‌ ಮರ್ಡರ್‌ ಪ್ರಕರಣ; ಮನೆ ತಲುಪಿದ ಮೂವರ ಮೃತದೇಹ

ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ 5, 8 ಮತ್ತು 9ನೇ ತರಗತಿ ಮೌಲ್ಯಾಂಕನ ಉತ್ತರ ಪತ್ರಿಕೆಗಳ ಮೌಲ್ಯಮಾಪನದ ಹೊರೆ ಇಳಿಸಿ ಮಂಡಳಿ ಹೊಸ ಸುತ್ತೋಲೆ ಹೊರಡಿಸಿದೆ.

8ನೇ ತರಗತಿಯ ಪ್ರತಿ ಮೌಲ್ಯಮಾಪಕರು ದಿನಕ್ಕೆ 50, 9ನೇ ತರಗತಿಯ ಪ್ರತಿ ಮೌಲ್ಯಮಾಪಕರು 30 ಹಾಗೂ ಎಂದಿನಂತೆ 5ನೇ ತರಗತಿಯ ಪ್ರತಿ ಮೌಲ್ಯಮಾಪಕರು 80 ಉತ್ತರ ಪತ್ರಿಕೆ ಮೌಲ್ಯಮಾಪನ ಮಾಡುವಂತೆ ಪರಿಷ್ಕರಿಸಿದೆ. ಈ ಮೊದಲು 5ನೇ ತರಗತಿಗೆ 80, 8ನೇ ತರಗತಿಗೆ 60 ಮತ್ತು 9ನೇ ತರಗತಿಗೆ 40 ಉತ್ತರ ಪತ್ರಿಕೆ ಮೌಲ್ಯ ಮಾಪನ ಮಾಡಲು ನಿಗದಿಪಡಿಸಿತ್ತು. ಇದಕ್ಕೆ ಶಿಕ್ಷಕರ ವಲಯದಲ್ಲಿ ವಿರೋಧ ವ್ಯಕ್ತವಾಗಿತ್ತು.

ಎಸ್ಸೆಸ್ಸೆಲ್ಸಿ ವಾರ್ಷಿಕ ಕೊಠಡಿ ಮೇಲ್ವಿಚರಣಾ ಕಾರ್ಯ ಹಾಗೂ ಚುನಾವಣಾ ಕಾರ್ಯಗಳನ್ನು ಮುಂದಿನ ದಿನಗಳಲ್ಲಿ ನಿರ್ವಹಿಸಬೇಕಾಗಿರುವುದರಿಂದ ಯಾವುದೇ ವಿಳಂಬಕ್ಕೆ ಆಸ್ಪದ ನೀಡದಂತೆ ನಿಗದಿತ ಕಾಲಾವಧಿಯೊಳಗೆ ಮೌಲ್ಯಾಂಕನ ಕಾರ್ಯ ಪೂರ್ಣಗೊಳಿಸಲು ಮಂಡಳಿಯ ಅಧ್ಯಕ್ಷರು ಸೂಚಿಸಿದ್ದಾರೆ.

Advertisement
Advertisement