ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Paris Olympics 2024: ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ 3 ಲಕ್ಷ ಕಾಂಡೋಮ್ ವಿತರಣೆ! ಏನಿದು ಕಾಂಡೋಮ್ಸ್ ರಹಸ್ಯ?

Paris Olympics 2024:ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಬರೀ ಕ್ರೀಡಾಪಟುಗಳಿಗೆ ಬರೋಬ್ಬರಿ 3 ಲಕ್ಷ ಕಾಂಡೋಮ್ ಗಳನ್ನು (Condoms) ವಿತರಿಸಲಾಗಿದೆ.
12:43 PM Aug 02, 2024 IST | ಕಾವ್ಯ ವಾಣಿ
UpdateAt: 12:54 PM Aug 02, 2024 IST
Advertisement

Paris Olympics 2024: ಕ್ರೀಡಾ ಪ್ರಪಂಚದ ಅತಿ ದೊಡ್ಡ ಹಬ್ಬ ಒಲಿಂಪಿಕ್ಸ್ (Paris Olympics 2024) ನಿಂದಾಗಿ ಫ್ರಾನ್ಸ್ ನ ಪ್ಯಾರಿಸ್ ಸಿಂಗಾರಗೊಂಡಿದೆ. ಹೌದು, ಪ್ಯಾರಿಸ್ ನಲ್ಲಿ ಕ್ರೀಡಾನ್ಮೋದ ಉತ್ತುಂಗ ಪತಾಕೆ ಏರಿಕೆ. ವಿಶ್ವದ ಮೂಲೆ ಮೂಲೆಯಿಂದ ಲಕ್ಷಾಂತರ ಕ್ರೀಡಾಸಕ್ತರು, ಪ್ರವಾಸಿಗರು ಪ್ಯಾರಿಸ್ ವಿಮಾನ ಏರಿದ್ದಾರೆ. ಈಗಾಗಲೇ ಕ್ರೀಡಾಪಟುಗಳಿಗಾಗಿ ಕ್ರೀಡಾಗ್ರಾಮ ನಿರ್ಮಿಸಲಾಗಿದ್ದು, ಅದರಲ್ಲಿ 14,250 ಮಂದಿ ವಾಸವಿದ್ದಾರೆ. ಅತಿ ದೊಡ್ಡ ಡೈನಿಂಗ್ ಹಾಲ್ ಸೇರಿದಂತೆ ಇಲ್ಲಿ ಎಲ್ಲಾ ವ್ಯವಸ್ಥೆ ಮಾಡಲಾಗಿದೆ. ವಿಶೇಷ ಅಂದ್ರೆ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಬರೀ ಕ್ರೀಡಾಪಟುಗಳಿಗೆ ಬರೋಬ್ಬರಿ 3 ಲಕ್ಷ ಕಾಂಡೋಮ್ ಗಳನ್ನು (Condoms) ವಿತರಿಸಲಾಗಿದೆ.

Advertisement

ಹೌದು, ಸಿಟಿ ಆಫ್ ಲವ್  (City of Love) ಎಂದೇ ಹೆಸರಾದ ಪ್ಯಾರಿಸ್ ನಲ್ಲಿ ಕ್ರೀಡೋನ್ಮಾದದ ಜತೆಗೆ ಪ್ರೇಮೋನ್ಮಾದವೂ ಹರಿಯುತ್ತಿದೆ. ಕಳೆದ ಒಲಿಂಪಿಕ್ ನಲ್ಲಿ ಕೋವಿಡ್ ಕಾರಣದಿಂದ ಕೇವಲ ಅಪ್ಪುಗೆಗೆ ಅಷ್ಟೇ ಸೀಮಿತವಾಗಿದ್ದ ಪ್ರೇಮ ವಿನಿಮಯಕ್ಕೆ ಇದೀಗ ಯಾವುದೇ ಅಡೆತಡೆಯಿಲ್ಲ. ಇದೇ ಕಾರಣಕ್ಕೆ ಇಷ್ಟೊಂದು ಕಾಂಡೋಮ್ ಗಳ ವಿತರಣೆ ಮಾಡಲಾಗುತ್ತಿದೆ. ಅಂದರೆ ಒಲಿಂಪಿಕ್ಸ್​ನಲ್ಲಿ ರತಿಕ್ರೀಡೆಯು ಸಾಮಾನ್ಯ. ಮುಖ್ಯವಾಗಿ ಕೆಲ ಕ್ರೀಡಾಪಟುಗಳು ಒತ್ತಡವನ್ನು ನಿವಾರಿಸಿಕೊಳ್ಳಲು ಸೆಕ್ಸ್ ಮೊರೆ ಹೋಗುತ್ತಾರೆ. ಇಂತಹ ಸಂದರ್ಭಗಳಲ್ಲಿ ಲೈಂಗಿಕ ಕಾಯಿಲೆಗಳಿಂದ ಪಾರಾಗಲು ಅಥ್ಲೀಟ್​ಗಳಿಗೆ ಕಾಂಡೋಮ್​ಗಳನ್ನು ನೀಡಲು ಒಲಿಂಪಿಕ್ಸ್ ಆಯೋಜಕರು ನಿರ್ಧರಿಸಿದ್ದಾರೆ.

ಕೋವಿಡ್ ಕಾರಣದಿಂದ 2021ರಲ್ಲಿ ನಡೆದ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಬಹಳಷ್ಟು ನಿರ್ಬಂಧಗಳನ್ನು ಹೇರಲಾಗಿತ್ತು. ಕ್ರೀಡಾಪಟುಗಳ ರೂಮ್ ಗಳಲ್ಲಿ ಕಾರ್ಡ್ ಬೋರ್ಡ್ ಮಂಚ ಅಂದರೆ ಹೆಚ್ಚು ಒತ್ತಡ ಹಾಕಿದರೆ ಮುರಿಯುವಂತಹ ಮಂಚಗಳನ್ನು ನೀಡಲಾಗಿತ್ತು. ಈ ಎಲ್ಲಾ ಕಾರಣಗಳಿಂದ ಆಟಗಾರರಿಗೆ ಅದು ಭಿನ್ನ ಒಲಿಂಪಿಕ್ಸ್ ಅನುಭವವಾಗಿತ್ತು. ಆದರೆ ಈಗ  ಎಲ್ಲವೂ ಸರಿಯಾಗಿದೆ. ಒಂದು ವರದಿಯ ಪ್ರಕಾರ ಪ್ರತಿ ಅಥ್ಲೀಟ್ ಗೆ ಪ್ರತಿ ದಿನ ಎರಡು ಕಾಂಡೋಮ್ ಗಳಂತೆ ನೀಡಲಾಗುತ್ತಿದೆ ಎನ್ನಲಾಗುತ್ತಿದೆ.

Advertisement

Wayanad Tragedy: ವಯನಾಡಿನ ಭೀಕರ ದುರಂತದಲ್ಲಿ ಕಾಣೆಯಾದವರು ಎಷ್ಟು..? : ನಾಪತ್ತೆಯಾದವರಿಗಾಗಿ ಬರೋಬ್ಬರಿ 3000 ಮಂದಿಯಿಂದ ಶೋಧ ಕಾರ್ಯ ಆರಂಭ

Advertisement
Advertisement