For the best experience, open
https://m.hosakannada.com
on your mobile browser.
Advertisement

Bengaluru: ಬೆಂಗಳೂರಲ್ಲೇ ನಿರ್ಮಾಣ ಆಗುತ್ತೆ 2ನೇ ಅಂತರರಾಷ್ಟ್ರೀಯ ಏರ್ಪೋರ್ಟ್, ಸರ್ಕಾರದ ಘೋಷಣೆ- ಎಲ್ಲಿ, ಯಾವಾಗ?

Bengaluru: ಬೆಂಗಳೂರನಲ್ಲೇ 50 - 60 ಕಿಮೀ ಅಂತರದಲ್ಲಿಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(International Airport) ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ರಾಜ್ಯ ಸರ್ಕಾರ ಹೊಸ ಘೋಷಣೆ ಮಾಡಿದೆ.
12:25 PM Jul 17, 2024 IST | ಸುದರ್ಶನ್
UpdateAt: 12:25 PM Jul 17, 2024 IST
bengaluru  ಬೆಂಗಳೂರಲ್ಲೇ ನಿರ್ಮಾಣ ಆಗುತ್ತೆ 2ನೇ ಅಂತರರಾಷ್ಟ್ರೀಯ ಏರ್ಪೋರ್ಟ್  ಸರ್ಕಾರದ ಘೋಷಣೆ  ಎಲ್ಲಿ  ಯಾವಾಗ
Advertisement

Bengaluru: ಬೆಂಗಳೂರನಲ್ಲೇ 50 - 60 ಕಿಮೀ ಅಂತರದಲ್ಲಿಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(International Airport) ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ರಾಜ್ಯ ಸರ್ಕಾರ ಹೊಸ ಘೋಷಣೆ ಮಾಡಿದೆ.

Advertisement

ಹೌದು, ಬೆಂಗಳೂರು(Bengaluru) ನಗರದಿಂದ 50 - 60 ಕಿಮೀ ಅಂತರದಲ್ಲಿಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ ದಕ್ಷಿಣ, ಪಶ್ಚಿಮ ಮತ್ತು ಉತ್ತರ ಭಾಗದಲ್ಲಿ 7 - 8 ಸೂಕ್ತ ಸ್ಥಳಗಳನ್ನು ಗುರುತಿಸಲಾಗಿದೆ. ರಾಜಧಾನಿಗೆ ಸನಿಹದಲ್ಲೇ ಎರಡನೇ ವಿಮಾನ ನಿಲ್ದಾಣ ನಿರ್ಮಿಸಲು ತೀರ್ಮಾನಿಸಲಾಗಿದ್ದು, ನಗರದಿಂದ 100 ಕಿಮೀ ಆಚೆ ವಿಮಾನ ನಿಲ್ದಾಣ ನಿರ್ಮಿಸುವ ಪ್ರಸ್ತಾವ ಇಲ್ಲ ಎಂದು ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂಬಿ ಪಾಟೀಲ್‌(M B Patil) ತಿಳಿಸಿದ್ದಾರೆ.

GT World Mall: ಪಂಚೆಯುಟ್ಟ ರೈತನಿಗೆ ಅವಮಾನ ಪ್ರಕರಣ; ಜಿಟಿ ಮಾಲ್‌ ಸಿಬ್ಬಂದಿಯಿಂದ ಕ್ಷಮೆ

Advertisement

ಈ ಕುರಿತು ಮಾತನಾಡಿದ ಅವರು ತುಮಕೂರು ಹಾಗೂ ಚಿತ್ರದುರ್ಗದ ಮಧ್ಯೆ ವಿಮಾನ ನಿಲ್ದಾಣ ನಿರ್ಮಾಣ ಮಾಡುವ ಪ್ರಸ್ತಾಪ ಇಲ್ಲ. ಆದರೆ ಬೆಂಗಳೂರಿನಲ್ಲಿ (Bengaluru) 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾಡುವ ಪ್ರಸ್ತಾಪ ಇದೆ. ಈಗಾಗಲೇ ಏರ್‌ಪೋರ್ಟ್‌ ನಿರ್ಮಾಣಕ್ಕೆ 7-8 ಸ್ಥಳಗಳನ್ನ ಗುರುತಿಸಲಾಗಿದೆ. ಈಗ ಇರೋ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅನುಕೂಲ ಅಗುವಂತೆ ಹಾಗೂ ರಾಜ್ಯದ ಜನರಿಗೆ ಅನುಕೂಲ ಆಗುವಂತೆ ಹೊಸ ಏರ್‌ಪೋರ್ಟ್‌ (Airport) ನಿರ್ಮಾಣ ಮಾಡ್ತೀವಿ ಎಂದು ಹೇಳಿದ್ದಾರೆ.

ಅಲ್ಲದೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ 125 ಕಿ.ಮೀ ವ್ಯಾಪ್ತಿಯಲ್ಲಿ 2ನೇ ವಿಮಾನ ನಿಲ್ದಾಣಕ್ಕೆ ಅವಕಾಶ ನೀಡಬಾರದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಾವು ಈಗ ಭೂಸ್ವಾಧೀನ ಪ್ರಕ್ರಿಯೆಯನ್ನು ಪ್ರಾರಂಭಿಸಿದರೆ, ಅದನ್ನು ಪೂರ್ಣಗೊಳಿಸಲು ಇನ್ನೂ ಏಳೆಂಟು ವರ್ಷಗಳು ಬೇಕಾಗುತ್ತದೆ. ಈ ಸಂಬಂಧ ಈಗಾಗಲೇ ಅಧಿಕಾರಿಗಳು ಹಾಗೂ ತಜ್ಞರೊಂದಿಗೆ ಸಭೆ ನಡೆಸಿದ್ದೇನೆ ಎಂದು ಪಾಟೀಲ್ ತಿಳಿಸಿದರು.

New Ration Card Application: ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಅವಕಾಶ; ಆಹಾರ ಇಲಾಖೆ ಸ್ಪಷ್ಟನೆ

Advertisement
Advertisement
Advertisement