Congress leader: 70ರ ಕಾಂಗ್ರೆಸ್ ನಾಯಕನ 2 ಅಶ್ಲೀಲ ವಿಡಿಯೋ ವೈರಲ್ !!
Congress leader:70 ರ ಪ್ರಾಯದಲ್ಲಿ ಹಿರಿಯ ಕಾಂಗ್ರೆಸ್ ನಾಯಕರೊಬ್ಬರ ಅಶ್ಲೀಲ ವಿಡಿಯೋ ಒಂದು ವೈರಲ್ ಆಗಿದ್ದು, ಭಾರೀ ವೈರಲ್ ಆಗ್ತಿದೆ. ಇದೇ ವಿಚಾರವನ್ನು ಇಟ್ಟುಕೊಂಡು ಬಿಜೆಪಿ ಗಾಂಧಿ ಕುಟುಂಬದವನ್ನು ಕೆಣಕಿದೆ.
ಹೌದು, ಅಪ್ರಾಪ್ತ ಯುವತಿ ಮತ್ತು ಇತರ ಮಹಿಳೆಯರ ಮೇಲೆ ಅತ್ಯಾಚಾರದ ಆರೋಪಕ್ಕೊಳಗಾಗಿರುವ ರಾಜಸ್ಥಾನನದ(Rajasthan)ಬಾರ್ಮರ್ ಮಾಜಿ ಶಾಸಕ, ಕಾಂಗ್ರೆಸ್ ನ ಪ್ರಬಲ ನಾಯಕ(Congress leader) ಹಾಗೂ ರಾಹುಲ್ ಗಾಂಧಿ ಅವರ ಅತ್ಯಾಪ್ತ ಮೇವಾರಾಂ ಜೈನ್(Mevaram Jain) ಅವರ ಎರಡು ಅಶ್ಲೀಲ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.
ವೈರಲ್ ಆದ ವೀಡಿಯೊದಲ್ಲಿ ಏನಿದೆ?
ವೈರಲ್ ವಿಡಿಯೋದಲ್ಲಿ, ಮೇವಾರಂ ಜೈನ್ ರೂಮ್ ಒಂದಕ್ಕೆ ಹೋದ ತಕ್ಷಣ, ಮಹಿಳೆಯೊಬ್ಬರು ವಾರ್ಡ್‌ರೋಬ್ ರ್ಯಾಕ್‌ನಲ್ಲಿ ತನ್ನ ಮೊಬೈಲ್ ಕ್ಯಾಮೆರಾವನ್ನು ಸ್ವಿಚ್ ಆನ್ ಮಾಡಿರುವುದನ್ನು ಕಾಣಬಹುದು. ಇದಾದ ನಂತರ ಮಾಜಿ ಶಾಸಕರು ಕೊಠಡಿಗೆ ಬಂದು ಸ್ವಲ್ಪ ಹೊತ್ತು ಮಾತನಾಡಿ ನೀರು ಕುಡಿದು ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಲು ಆರಂಭಿಸುತ್ತಾರೆ. ಸದ್ಯ ಈ ವಿಡಿಯೋ ವೈರಲ್ ಆಗುತ್ತಿದ್ದಂತಿ ಮೂರು ಬಾರಿ ಶಾಸಕರಾಗಿದ್ದ ಹಿರಿಯ ಕಾಂಗ್ರೆಸ್ ನಾಯಕ ಮೇವಾರಾಂ ವಿರುದ್ಧ ಕ್ರಮಕ್ಕೆ ಭಾರೀ ಕೂಗು ಎದ್ದಿದೆ.
https://www.instagram.com/reel/C1wGkejLWQD/?igsh=cTA3bDRyaWl2MHc=
ಮುಂಚಿತವಾಗೆ ದೂರು ದಾಖಲು :
ವಿಡಿಯೋ ವೈರಲ್ ಆಗೋ ಮುಂಚೆ ಕೆಲವು ದಿನಗಳ ಮೊದಲು ಮೇವಾರಂ ಜೈನ್ ವಿರುದ್ಧ ವಿವಾಹಿತ ಮಹಿಳೆಯೊಬ್ಬರು ಜೋಧ್‌ಪುರದ ರಾಜೀವ್ ಗಾಂಧಿ ನಗರ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಿಸಿದ್ದರು. ಜೈನ್ ಮತ್ತು ಆತನ ಸಹಚರ ರಾಮಸ್ವರೂಪ್ ಆಚಾರ್ಯ ತನ್ನ ಮೇಲೆ ಅತ್ಯಾಚಾರವೆಸಗಿದ್ದಾರೆ ಮತ್ತು ತನ್ನ 15 ವರ್ಷದ ಅಪ್ರಾಪ್ತ ಮಗಳೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಆಕೆ ಆರೋಪಿಸಿದ್ದಳು. ಮಹಿಳೆಯ ದೂರಿನ ಮೇರೆಗೆ ಮೇವಾರಂ ಜೈನ್ ಮತ್ತು ಆರ್‌ಪಿಎಸ್ ಆನಂದ್ ಸಿಂಗ್ ರಾಜಪುರೋಹಿತ್ ಸೇರಿದಂತೆ 9 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
https://www.instagram.com/reel/C1v68rvL0sn/?igsh=N2dwazZ2YWgwcHA4
ಮಹಿಳೆಯು ದೂರು ನೀಡಿದ ಸಮಯದಲ್ಲಿ ಎರಡು ಅಶ್ಲೀಲ ವೀಡಿಯೊಗಳನ್ನು ಸಹ ಉಲ್ಲೇಖಿಸಿದ್ದಳು. ದೂರಿನನ್ವಯ ಮಹಿಳೆಯ ವೈದ್ಯಕೀಯ ಪರೀಕ್ಷೆ ನಡೆಸಲಾಗಿತ್ತು. ಹೇಳಿಕೆಗಳನ್ನೂ ದಾಖಲಿಸಿಕೊಳ್ಳಲಾಗಿದೆ. ಇದೀಗ ಈ ವಿಡಿಯೋ ಹೊರಬಿದ್ದ ಬೆನ್ನಲ್ಲೇ ಮತ್ತೊಮ್ಮೆ ಗದ್ದಲ ಎದ್ದಿದೆ.
ಇನ್ನು ಈ ಕುರಿತು ಬಿಜೆಪಿ ಕಾಂಗ್ರೆಸ್ ಅನ್ನು ಬಹುವಾಗಿ ಕಟುಕಿದೆ. ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲಾ, ತಮ್ಮ ಇನ್ಸ್ಟಾಗ್ರಾಂನ ಖಾತೆಯಲ್ಲಿ ಸರಣಿ ಫೋಟೋ, ವಿಡಿಯೋಗಳನ್ನು ಹಾಕಿರುವ ಈ 70ರ ಮಾಜಿ ಶಾಸಕ, ತನ್ನ ರಾಕ್ಷಸ ಕೃತ್ಯಗಳಿಗಾಗಿ 12-14 ವರ್ಷ ವಯಸ್ಸಿನ ಹುಡುಗಿಯರನ್ನು ಬಯಸುತ್ತಾನೆ. ಅವರ ಖಾಸಗಿ ಭಾಗಗಳಿಗೆ ರಾಡ್‌ಗಳನ್ನು ಹಾಕಿ ಚಿತ್ರಹಿಂಸೆ ನೀಡಿ ವಿಕೃತ ಆನಂದ ಪಡೆಯುತ್ತಾನೆ. ಗಾಂಧಿ ಕುಟುಂಬಕ್ಕೆ ಹತ್ತಿರ ಎನಿಸಿರುವ ಅವರು ಟಿಕೆಟ್ ಪಡೆವಲ್ಲಿ ಈ ಕುಟುಂಬದ ಆಶೀರ್ವಾದವೂ ಇತ್ತು ಎಂದು ಆರೋಪಿಸಿದ್ದಾರೆ. ಅಲ್ಲದೆ ಮೇವಾರಂ ಹಗರಣದ ಸಂತ್ರಸ್ತರನ್ನು ಭೇಟಿ ಮಾಡುತ್ತೀರಾ ಎಂದು ಪ್ರಿಯಾಂಕಾ ಗಾಂಧಿಗೆ ಕೇಳಿರುವ ಪೂನಾವಾಲಾ, ಎಲ್‌ಕೆಎಫ್‌ಸಿ ಈಗ ಫ್ಯಾಕ್ಟ್ ಚೆಕ್ ಮಾಡುತ್ತದೆಯೇ? ಸುಪ್ರಿಯಾ ಶ್ರೀನಾಥೆ ಈ ಬಗ್ಗೆ ಬಾಯಿ ತೆರೆಯುತ್ತಾಳೆಯೇ ಎಂದು ಪ್ರಶ್ನಿಸಿದ್ದಾರೆ.