For the best experience, open
https://m.hosakannada.com
on your mobile browser.
Advertisement

NDA: ಬಿಜೆಪಿಗೆ 11 ಪಕ್ಷೇತರರ ಬೆಂಬಲ - 303 ಆದ NDA ಬಲ !!

NDA: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ(BJp) 240 ಸ್ಥಾನಗಳನ್ನು ಮಾತ್ರ ಪಡೆದಿದ್ದು ಸರ್ಕಾರ ರಚಿಸಲು ಬಹುಮತವನ್ನು ಪಡೆದಿಲ್ಲ. NDA ಮಿತ್ರಪಕ್ಷಗಳ ಬೆಂಬಲದೊಂದಿಗೆ ಸಮ್ಮಿಶ್ರ ಸರಕಾರ ರಚನೆಯಾಗಲಿದೆ.
08:14 AM Jun 07, 2024 IST | ಸುದರ್ಶನ್
UpdateAt: 08:14 AM Jun 07, 2024 IST
nda  ಬಿಜೆಪಿಗೆ 11 ಪಕ್ಷೇತರರ ಬೆಂಬಲ   303 ಆದ nda ಬಲ
Advertisement

NDA: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ(BJp) 240 ಸ್ಥಾನಗಳನ್ನು ಮಾತ್ರ ಪಡೆದಿದ್ದು ಸರ್ಕಾರ ರಚಿಸಲು ಬಹುಮತವನ್ನು ಪಡೆದಿಲ್ಲ. ಆದರೆ NDA ಮಿತ್ರಪಕ್ಷಗಳ ಬೆಂಬಲದೊಂದಿಗೆ ಸಮ್ಮಿಶ್ರ ಸರಕಾರ ರಚನೆಯಾಗಲಿದೆ. 3 ನೇ ಬಾರಿಗೆ ನರೇಂದ್ರ ಮೋದಿಯವರು(Narendra Modi) ಪ್ರಧಾನಿಯಾಗಲಿದ್ದಾರೆ. ಆದರೆ ಈ ಬೆನ್ನಲ್ಲೇ ಬಿಜೆಪಿಗೆ ಭರ್ಜರಿ ಗುಡ್ ನ್ಯೂಸ್ ಸಿಕ್ಕಿದೆ.

Advertisement

ಇದನ್ನೂ ಓದಿ: ಅಪಘಾತ ಮಾಡಿ ತಪ್ಪಿಸಿಕೊಳ್ಳುವ ಭರದಲ್ಲಿ ಬೈಕ್‌ಗೆ ಡಿಕ್ಕಿ ಹೊಡೆದ ಕಾರು ; ಇಬ್ಬರ ದಾರುಣ ಸಾವು

ಬಿಜೆಪಿ ಈಗಾಗಲೇ 240 ಸ್ಥಾನಗಳನ್ನು ಗೆದ್ದು ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಅದಕ್ಕೆ NDA ಮಿತ್ರಪಕ್ಷಗಳು ಬೆಂಬಲ ನೀಡಿದ ಕಾರಣ 292 ಸ್ಥಾನಗಳು ಆಗಿ ಸರ್ಕಾರ ರಚನೆಯಾಗುತ್ತಿದೆ. ಇದರೊಂದಿಗೆ ಬಿಜೆಪಿ ಮತ್ತೊಂದು ಗುಡ್ ನ್ಯೂಸ್ ಎದುರಾಗಿದ್ದು ದೇಶದಲ್ಲಿ ಪಕ್ಷೇತರವಾಗಿ ಗೆದ್ದಿರುವ 11 ಸಂಸದರು ಕೂಡ NDA ಕೂಟಕ್ಕೆ ಬೆಂಬಲ ನಿಡಿದ್ದಾರೆ. ಈ ಮೂಲಕ NDA ಬಲ 300ಗಡಿ ದಾಟಿದ್ದು 303ಕ್ಕೆ ಏರಿಕೆಯಾಗಿದೆ.

Advertisement

ಅಂದಹಾಗೆ ಬಹುಮತ ದೊರೆಯದ ಹಿನ್ನೆಲೆ ಬಿಜೆಪಿ ಮುನ್ನೆಚ್ಚರಿಕೆ ಕ್ರಮವಾಗಿ ಸಣ್ಣ ಪಕ್ಷಗಳಿಂದ ಗೆದ್ದವರು ಮತ್ತು ಪಕ್ಷೇತರರ ಬೆಂಬಲ ಪಡೆಯಲು ಪ್ರಯತ್ನಿಸಿದೆ. ಈ ಪೈಕಿ 11 ನಾಯಕರು ಎನ್‌ಡಿಎಗೆ ಬೆಂಬಲ ನೀಡಿದೆ ಎನ್ನಲಾಗಿದೆ. ಅಮಿತ್ ಶಾ(Amith Shah) ಅವರೇ ಪಕ್ಷೇತರರಿಗೆ ಕರೆ ಮಾಡಿ ಬೆಂಬಲ ಕೇಳುತ್ತಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಯಾವುದೇ ಕಾರಣಕ್ಕೂ ʼಗ್ಯಾರಂಟಿʼ ಯೋಜನೆಗಳನ್ನು ನಿಲ್ಲಿಸುವುದಿಲ್ಲ; ಗೃಹ ಸಚಿವ ಡಾ. ಜಿ. ಪರಮೇಶ್ವರ್

Advertisement
Advertisement
Advertisement