For the best experience, open
https://m.hosakannada.com
on your mobile browser.
Advertisement

Kannada Medium: ಕನ್ನಡ ಮಾಧ್ಯಮಕ್ಕೆ ಪ್ರವೇಶ ಪಡೆದ ಮಕ್ಕಳಿಗೆ 10,000ರೂ ಪ್ರೋತ್ಸಾಹ ಧನ !!

Kannada Medium: ಕನ್ನಡ ಮಾಧ್ಯಮದಲ್ಲಿ ಓದಲು ಪ್ರವೇಶ ಪಡೆಯುವವರಿಗೆ ರೂ.10,000 ಪ್ರೋತ್ಸಾಹಧನವನ್ನು ನೀಡಲಾಗುತ್ತಿದೆ.
02:28 PM May 18, 2024 IST | ಸುದರ್ಶನ್
UpdateAt: 02:42 PM May 18, 2024 IST
kannada medium  ಕನ್ನಡ ಮಾಧ್ಯಮಕ್ಕೆ ಪ್ರವೇಶ ಪಡೆದ ಮಕ್ಕಳಿಗೆ 10 000ರೂ ಪ್ರೋತ್ಸಾಹ ಧನ
Advertisement

Kannada Medium: ರಾಜ್ಯದಲ್ಲಿ ನಾಯಾಕೊಡೆಗಳಂತೆ ಹುಟ್ಟಿಕೊಂಡಿರುವ ಖಾಸಗೀ ಶಾಲೆಗಳಿಂದಾಗಿ ಹೆಚ್ಚಿನ ಕನ್ನಡ ಮಾಧ್ಯಮ ಶಾಲೆಗಳು ಮುಚ್ಚುತ್ತಿರುವ ಸಮಯದಲ್ಲೇ ಕನ್ನಡ ಮಾಧ್ಯಮ(Kannada Medium) ಶಾಲೆಗಳನ್ನು ಉಳಿಸಿ ಬೆಳೆಸುವಲ್ಲಿ ತನ್ನ ಸೇವೆ ಸಮರ್ಪಿಸಲು ಶಿಕ್ಷಣ ಸಂಸ್ಥೆಯೊಂದು ಮುಂದೆ ಬಂದಿದ್ದು ಕನ್ನಡ ಮಾಧ್ಯಮದಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಲು ಮುಂದಾಗಿದೆ.

Advertisement

ಎಲ್ಲಾ ಶಾಲಾ-ಕಾಲೇಜುಗಳಲ್ಲಿ 2024-25ನೇ ಶೈಕ್ಷಣಿಕ ಸಾಲಿನ ಪ್ರವೇಶ ಪ್ರಕ್ರಿಯೆ ಶೀಘ್ರದಲ್ಲೇ ಆರಂಭವಾಗಲಿದೆ. ಈ ಸಾಲಿನ ಪ್ರವೇಶಾತಿಗೆ ಸಂಬಂಧ ಇಲ್ಲೊಂದು ಗುಡ್‌ ನ್ಯೂಸ್‌ ಇದೆ. ಕನ್ನಡ ಮಾಧ್ಯಮದಲ್ಲಿ ಓದಲು ಪ್ರವೇಶ ಪಡೆಯುವವರಿಗೆ ರೂ.10,000 ಪ್ರೋತ್ಸಾಹಧನವನ್ನು ನೀಡಲಾಗುತ್ತಿದೆ. ಹಾಗಿದ್ರೆ ಈ ಹೊಸ ಕಾರ್ಯಕ್ಕೆ ಮುಂದಾದ ಸಂಸ್ಥೆ ಯಾವುದು? ಹೇಗೆ ಪ್ರೋತ್ಸಾಹ ಧನ ನೀಡಲಾಗುತ್ತದೆ? ಎಂಬುದರ ಬಗ್ಗೆ ತಿಳಿಯೋಣ.

ಯಾವುದು ಈ ಸಂಸ್ಥೆ?

Advertisement

ಮಾಗಡಿ(Magadi) ರಸ್ತೆ ಟೋಲ್‌ಗೇಟ್‌ ಬಳಿ ವಿದ್ಯಾರಣ್ಯ ನಗರದಲ್ಲಿರುವ ಶ್ರೀ ಮಂಜುನಾಥ ವಿದ್ಯಾಲಯದಲ್ಲಿ(Shree Manjunatha Vidhyalaya) ಕನ್ನಡ ಮಾಧ್ಯಮದಲ್ಲಿ 2024-25ನೇ ಸಾಲಿಗೆ 5ನೇ ತರಗತಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ, ಅಡ್ಮಿಷನ್‌ ಪಡೆದ ತಕ್ಷಣ ರೂ.10,000 ಪ್ರೋತ್ಸಾಹಧನವನ್ನು ನೀಡಲಾಗುತ್ತದೆ. ದಾಖಲಾತಿ ಪಡೆಯುವವರು 10ನೇ ತರಗತಿವರೆಗೆ ಇದೇ ಶಾಲೆಯಲ್ಲಿ ಶಿಕ್ಷಣ ಮುಂದುವರೆಸಬೇಕು ಎಂದು ವಿದ್ಯಾಲಯ ಹೇಳಿದೆ.

ಅಂದಹಾಗೆ ಸಂಸ್ಥೆಯ ಅಧ್ಯಕ್ಷ ಮತ್ತು ಪ್ರಾಂಶುಪಾಲ ನಾಗರಾಜು ಸಾರಥ್ಯದಲ್ಲಿ 56 ವರ್ಷಗಳಿಂದ ಪೂರ್ವ ಪ್ರಾಥಮಿಕದಿಂದ 10ನೇ ತರಗತಿಯವರೆಗೆ ಶಿಕ್ಷಣ ನೀಡಲಾಗುತ್ತಿದೆ. ಹಿಂದುಳಿದ ವರ್ಗಗಳ ಮಕ್ಕಳಿಗೆ ಶುಲ್ಕವಿಲ್ಲದೆ ಶಿಕ್ಷಣ ಮತ್ತು ಇಂಗ್ಲಿಷ್ ಮಾಧ್ಯಮದ ಮಕ್ಕಳಿಗೆ ಕಡಿಮೆ ಶುಲ್ಕದಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಸಕಲ ವ್ಯವಸ್ಥೆ ಕಲ್ಪಿಸಲಾಗಿದೆ.

ಏನೆಲ್ಲಾ ಸೌಲಭ್ಯಗಳಿವೆ?

ಮಕ್ಕಳ ಆರೋಗ್ಯ ಪೋಷಣೆಗೆ ಸಂಬಂಧಿಸಿದ ಆಟ, ವ್ಯಾಯಾಮ, ಯೋಗ ಶಿಕ್ಷಣ ನೀಡಲಾಗುತ್ತದೆ. ಸಂಸ್ಥೆಯಲ್ಲಿ ಎನ್‌ಸಿಸಿ ಸೌಲಭ್ಯ ಸಹ ಇದೆ. ಶಾಲೆಯ ಸಮೀಪ ಸರ್ಕಾರಿ ಹಾಸ್ಟೆಲ್ ಸೌಲಭ್ಯ ಇದೆ. ಸರ್ಕಾರಿ ಶುಲ್ಕವನ್ನು ಆಡಳಿತ ಮಂಡಳಿ ಭರಿಸುತ್ತದೆ. ಮಕ್ಕಳಿಗೆ ಉಚಿತ ಪಠ್ಯಪುಸ್ತಕ ಮತ್ತು ಬಸ್ ಪಾಸ್ ವ್ಯವಸ್ಥೆ ಇದೆ. ಉಚಿತ ಸಮವಸ್ತ್ರ, ಉಪಾಹಾರ ಲಭ್ಯವಿದೆ. ಸರ್ಕಾರದ ಅನುದಾನದಿಂದ ಇಸ್ಕಾನ್‌ ಸಂಸ್ಥೆಯು ಹಾಲು, ಊಟ, ಮೊಟ್ಟೆ, ಬಾಳೆಹಣ್ಣು ನೀಡಲಾಗುತ್ತದೆ ಎಂದು ಸಂಸ್ಥೆ ಹೇಳಿದೆ.

Advertisement
Advertisement
Advertisement