ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Turtle Father: 800 ಮಕ್ಕಳ ತಂದೆ ಈ ಆಮೆ | ಇನ್ನೂ ಮುಗಿದಿಲ್ಲ ಈತನ ಆಸೆ!

10:16 AM Jan 26, 2023 IST | ಅಶ್ವಿನಿ ಹೆಬ್ಬಾರ್
UpdateAt: 10:25 AM Jan 26, 2023 IST
Advertisement

ಅಳಿವಿನಂಚಿನಲ್ಲಿರುವ ಜೀವಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಅಪಾಯದ ಹೆಚ್ಚಿನ ಅಪಾಯದೊಂದಿಗೆ, ವನ್ಯಜೀವಿಗಳ ರಕ್ಷಣೆಯ ಜವಾಬ್ದಾರಿಯ ಹೊಣೆಯು ಕೂಡ ಪ್ರತಿಯೊಬ್ಬರ ಮೇಲಿದೆ. ಹೀಗೆ ಅಳಿವಿನ ಅಂಚಿನಲ್ಲಿರುವ ಜೀವಿಗಳಲ್ಲಿ ಆಮೆ ಕೂಡ ಸೇರಿದೆ.

Advertisement

ಸದ್ಯ , ಈಕ್ವೆಡಾರ್‌ನಲ್ಲಿ ವಾಸಿಸುವ ಡಿಯಾಗೋ ಆಮೆ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಡಿಯಾಗೋ ಆಮೆ ಹೆಚ್ಚು ಜನಪ್ರಿಯ ಪ್ರಭೇದಗಳಲ್ಲಿ ಒಂದಾಗಿದ್ದು, ಈ ಆಮೆಯನ್ನು Chelonoidis Hadensis ಎಂಬ ವಿಶೇಷ ಪ್ರಭೇದಕ್ಕೆ ಈ ಆಮೆಯನ್ನು ಸೇರ್ಪಡೆಗೊಳಿಸಲಾಗಿದೆ. ಡಿಯಾಗೋ ಆಮೆ ತನ್ನ ವಿಶೇಷತೆ ಮೂಲಕ ಹೆಚ್ಚು ಪ್ರಸಿದ್ಧಿ ಪಡೆಯುತ್ತಿದೆ. ಅಂತಹ ವಿಶೇಷ ಏನಪ್ಪಾ ಅಂತ ಯೋಚಿಸುತ್ತಿದ್ದೀರಾ??? ಮನುಷ್ಯನ ಜೀವಿತಾವಧಿ ಗರಿಷ್ಠ ಅಂದರೆ 100 ವರ್ಷ .. ಆದ್ರೆ ಈ ಆಮೆ ಕೂಡ ಮನುಷ್ಯನಷ್ಟೆ ಜೀವಿತಾವಧಿ ಹೊಂದಿರೋದು ವಿಶೇಷ.

ಈ ಆಮೆಯ ವಯಸ್ಸು ಈಗ ಬರೋಬ್ಬರಿ 100 ವರ್ಷಗಳಾಗಿದ್ದು, ಸದ್ಯ ಸೆಂಚುರಿಯ ಸಂಭ್ರಮದಲ್ಲಿದೆ. ಅಷ್ಟೆ ಅಲ್ಲ, ಈ ಆಮೆಗೆ ಮಕ್ಕಳು ಇದ್ದು, ಇದರ ಮರಿಗಳು ಎಷ್ಟು ಎಂದು ಕೇಳಿದರೆ ನೀವು ಸುಸ್ತಾಗೋದು ಪಕ್ಕಾ!!!? ಹೆಚ್ಚು ಎಂದರೆ ಎಷ್ಟಪ್ಪಾ?? ಇನ್ನೂರು ಇಲ್ಲವೇ ಮುನ್ನೂರು ಎಂದು ನೀವು ಅಂದಾಜಿಸುತ್ತಿರಬಹುದು. ಆದ್ರೆ ಈ ಆಮೆ ಬರೋಬ್ಬರಿ 800 ಮರಿಗಳ ತಂದೆ ಎಂದರೆ ಅಚ್ಚರಿಯಾಗುತ್ತದೆ. ಡಿಯಾಗೋ ಆಮೆ ಸುಮಾರು 80 ಕೆಜಿ ಇದ್ದು, ಇದರ ಉದ್ದ 35 ಇಂಚುಗಳು ಎನ್ನಲಾಗಿದೆ. ಕೆಲವೊಮ್ಮೆ ಈ ಆಮೆಗೆ ನಡೆಯಲು ಕೂಡ ಕಷ್ಟವಾಗುತ್ತದೆ. ವಯಸ್ಸಾಗಿರುವ ಕಾರಣ ತನ್ನ ಭಾರವನ್ನ ಸಂಭಾಳಿಸಲು ಹರಸಾಹಸ ಪಡುತ್ತಾ ಮಲಗುತ್ತದೆ ಎನ್ನಲಾಗಿದೆ.

Advertisement

ಆಮೆಯ ವಯಸ್ಸು ಮತ್ತು ಅದು ಹೊಂದಿರುವ ಮರಿಗಳ ಬಗ್ಗೆ ಪ್ರಸ್ತುತ ಎಲ್ಲೆಡೆ ಚರ್ಚೆ ನಡೆಯುತ್ತಿದ್ದು, ಆಮೆಯ ವಿವಿಧ ಪ್ರಕಾರಗಳು ಮತ್ತು ಪ್ರಭೇದಗಳು ಯಾವಾಗಲೂ ಚರ್ಚೆಯಲ್ಲಿರುತ್ತವೆ. ಈ ನಡುವೆ ಗ್ಯಾಲಪಗೋಸ್ ಎಂಬ ಆಮೆ ಪ್ರಭೇದಗಳು ಕ್ಷೀಣಿಸುತ್ತಿರುವ ಹಿನ್ನೆಲೆ ಪರಿಸರದಲ್ಲಿ ಆಮೆಗಳ ರಕ್ಷಣೆಯ ಸಲುವಾಗಿ ಈ ಜಾತಿಗಳನ್ನು ಉಳಿಸಲು ಕಾರ್ಯಕ್ರಮವನ್ನು ಜಾರಿಗೆ ತರಲಾಗಿದೆ.

ಗ್ಯಾಲಪಗೋಸ್ ಎಂಬ ಆಮೆಗೆ ಮಕ್ಕಳು ಆಗದ ಹಿನ್ನೆಲೆ ವಂಶ ಬೆಳೆಯಲು 1960 ರಲ್ಲಿ, ಯುಎಸ್ಎಯ ಕ್ಯಾಲಿಫೋರ್ನಿಯಾದ ಸ್ಯಾನ್ ಡಿಯಾಗೋ ಮೃಗಾಲಯದಿಂದ ಡಿಯಾಗೋವನ್ನು ಕರೆ ತರಲಾಗಿತ್ತು. ಚೆಲೋನಾಯಿಡಿಸ್ ಹಡೆನ್ಸಿಸ್ ಶಿಶುಗಳ ಸೃಷ್ಟಿಯಲ್ಲಿ ಡಿಯಾಗೋ ಮಹತ್ತರ ಪಾತ್ರ ವಹಿಸಿದ್ದು, ಬರೋಬ್ಬರಿ 800 ಮಕ್ಕಳನ್ನು ಉತ್ಪಾದಿಸುವ ಮೂಲಕ ಗಮನ ಸೆಳೆದಿದೆ. ಕಳೆದ ಹಲವು ದಶಕಗಳಿಂದ, ಫೌಸ್ಟೋ ಲಾರೆನಾ ಕೇಂದ್ರದಲ್ಲಿ ಚೆಲೋನಾಯಿಡಿಸ್ ಹ್ಯೂಡೆನ್ಸಿವ್ ಬಾಲಾಪರಾಧಿಗಳ ಸಂತಾನೋತ್ಪತ್ತಿ ಕಾರ್ಯ ನಡೆಯುತ್ತಿದೆ. ಆದರೆ, ಸದ್ಯ ಡಿಯಾಗೋ ಆಮೆ 2020 ರಲ್ಲಿ ಮರಿ ಹಾಕುವುದನ್ನು ನಿಲ್ಲಿಸಿದೆ ಎಂದು ತಿಳಿದು ಬಂದಿದೆ.

Related News

Advertisement
Advertisement