For the best experience, open
https://m.hosakannada.com
on your mobile browser.
Advertisement

WhatsApp Status: ವಾಟ್ಸಾಪ್ ಸ್ಟೇಟಸ್'ನಲ್ಲಿ 1 ನಿಮಿಷದ ವಿಡಿಯೋ ಅಪ್ಲೋಡ್'ಗೆ ಅವಕಾಶ !!

WhatsApp Status: ಅಂತೆಯೇ ಇದೀಗ ವಾಟ್ಸಪ್ ಬಳಕೆದಾರರಿಗೆ ಸ್ಟೇಟಸ್(WhatsApp Status) ಕುರಿತು ಭರ್ಜರಿ ಗುಡ್ ನ್ಯೂಸ್ ಕೊಟ್ಟಿದೆ.
06:48 AM May 18, 2024 IST | ಸುದರ್ಶನ್
UpdateAt: 09:25 AM May 18, 2024 IST
whatsapp status  ವಾಟ್ಸಾಪ್ ಸ್ಟೇಟಸ್ ನಲ್ಲಿ 1 ನಿಮಿಷದ ವಿಡಿಯೋ ಅಪ್ಲೋಡ್ ಗೆ ಅವಕಾಶ
Advertisement

WhatsApp Status: ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಬಳಕೆಯಾಗುವ ಮಾಧ್ಯಮವೆಂದರೆ ಅದು ವಾಟ್ಸಪ್. ಪ್ರಪಂಚದಾದ್ಯಂತ ವಾಟ್ಸಪ್ ಬಳಕೆದಾರರೇ ಹೆಚ್ಚು. ಹೀಗಾಗಿ ವ್ಯಾಟ್ಸಾಪ್(WhatsApp) ತನ್ನ ಬಳಕೆದಾರರಿಗೆ ಹೆಚ್ಚಿನ ಫೀಚರ್ಸ್, ಬೇಡಿಕೆಗೆ ಅನುಗುಣವಾಗಿ ಬದಲಾವಣೆಗಳನ್ನು ಮಾಡುತ್ತಾ ಬಂದಿದೆ. ಅಂತೆಯೇ ಇದೀಗ ವಾಟ್ಸಪ್ ಬಳಕೆದಾರರಿಗೆ ಸ್ಟೇಟಸ್(WhatsApp Status) ಕುರಿತು ಭರ್ಜರಿ ಗುಡ್ ನ್ಯೂಸ್ ಕೊಟ್ಟಿದೆ.

Advertisement

ಇದನ್ನೂ ಓದಿ: D K Shivkumar: 'ಇಂಡಿಯಾ' ಗೆ 300, 'ಎನ್‌ಡಿಎ'ಗೆ 200 ಸೀಟು - ಡಿಕೆಶಿ ಕೊಟ್ರು ಬಿಗ್ ಅಪ್ಡೇಟ್ !!

ಹೌದು, ತನ್ನ ಬಳಕೆದಾರರಿಗೆ ಹೊಸ ಹೊಸ ಫೀಚರ್ಸ್ ನೀಡಿ, ಆಗಾಗ ಸಿಹಿ ಸುದ್ದಿ ನೀಡೋ ವಾಟ್ಸಪ್ ಇದೀಗ ಮತ್ತೊಂದು ಗುಡ್ ನ್ಯೂಸ್ ನೀಡಿದೆ. ಸ್ಟೇಟಸ್ ವಿಡಿಯೋ ಪೋಸ್ಟ್ ನೀತಿಯಲ್ಲಿ ಕೆಲ ಬದಲಾವಣೆ ಮಾಡಿದ್ದು, ಬಳಕೆದಾರರಿಗೆ ಮತ್ತಷ್ಟು ಅನುಕೂಲ ಮಾಡಿದೆ. ಅದೇನೆಂದರೆ ಇನ್ಮುಂದೆ ಸ್ಟೇಟಸ್ನಲ್ಲಿ 30 ಸೆಕೆಂಡ್ ವಿಡಿಯೋ ಬದಲಿಗೆ 1 ನಿಮಿಷದ ವಿಡಿಯೋ ಅಪ್ಲೋಡ್ ಮಾಡಲು ಅವಕಾಶ ಮಾಡಿಕೊಟ್ಟಿದೆ.

Advertisement

ಯಸ್, ಇಷ್ಟು ದಿನ ವ್ಯಾಟ್ಸಪ್ ಸ್ಟೇಟಸ್‌ನಲ್ಲಿ 30 ಸೆಕೆಂಡ್ ವಿಡಿಯೋ ಅಪ್ಲೋಡ್ ಗೆ ಮಾತ್ರ ಅವಕಾಶ ನೀಡಲಾಗಿತ್ತು. ಆದರೆ ಇದೀಗ ವಿಡಿಯೋ ಸ್ಟೇಟಸ್ ಲಿಮಿಟ್ ಡಬಲ್ ಮಾಡಲಾಗಿದೆ. ಕಳೆದ ಮಾರ್ಚ್‌ನಲ್ಲಿ ವ್ಯಾಟ್ಸಾಪ್ ಸ್ಟೇಟಸ್‌ಗೆ ಪೋಸ್ಟ್ ಮಾಡುವ ವಿಡಿಯೋ ಮಿತಿಯನ್ನು 1 ನಿಮಿಷಕ್ಕೆ ಏರಿಕೆ ಮಾಡಿತ್ತು. ಇದೀಗ ಮತ್ತೊಂದು ಹೆಜ್ಜೆ ಮುಂದಿಟ್ಟಿರುವ ಈ ಜಾಲತಾಣದ ಸಂಸ್ಥೆ ಎಲ್ಲಾ ಆ್ಯಂಡ್ರಾಯ್ಡ್ ಹಾಗೂ ಐಫೋನ್ ಬಳಕೆದಾರರಿಗೆ ಈ ಫೀಚರ್ ಲಭ್ಯವಾಗುವಂತೆ ಮಾಡಿದೆ. ಇದರಿಂದ ಬಳಕೆದಾರರು ಇದೀಗ ಗರಿಷ್ಠ 60 ಸೆಕೆಂಡ್(1 ನಿಮಿಷ) ವಿಡಿಯೋ ಪೋಸ್ಟ್ ಮಾಡಲು ಸಾಧ್ಯವಿದೆ.

ಅಷ್ಟೇ ಅಲ್ಲದೆ ನೇರವಾಗಿ 1 ನಿಮಿಷದ ವಿಡಿಯೋವನ್ನು ಆ್ಯಪ್ ಮೂಲಕವೇ ರೆಕಾರ್ಡ್ ಮಾಡಿ ಪೋಸ್ಟ್ ಮಾಡಬಹುದು. ಅಥವಾ ಫೋನ್ ಸ್ಟೋರೇಜ್ ವಿಡಿಯೋಗಳನ್ನು ಅಷ್ಟೇ ಸುಲಭವಾಗಿ ಸ್ಟೇಟಸ್ ಪೋಸ್ಟ್ ಮಾಡಬಹುದು. ಇಷ್ಟು ಮಾತ್ರವಲ್ಲದೆ ಶೀಘ್ರದಲ್ಲೇ ಮತ್ತಷ್ಟು ಫೀಚರ್ಸ್ ನೀಡುವ ಸೂಚನೆಯನ್ನು ವ್ಯಾಟ್ಸಾಪ್ ನೀಡಿದೆ.

Advertisement
Advertisement
Advertisement